ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ (ಬುಧವಾರ–1997)

Last Updated 13 ಮೇ 2022, 19:47 IST
ಅಕ್ಷರ ಗಾತ್ರ

ಸಂಸತ್ತಿನಲ್ಲಿ ಆಂಧ್ರ ವಾದ ರಾಜ್ಯದ ಆಕ್ಷೇಪ

ನವದೆಹಲಿ, ಮೇ 13– ಕರ್ನಾಟಕವು ತುಂಗಾ ಮೇಲ್ದಂಡೆ ಯೋಜನೆಯನ್ನು ಕೈಗೊಂಡರೆ ಆಂಧ್ರಪ್ರದೇಶಕ್ಕೆ ತೊಂದರೆ ಆಗುವುದರಿಂದ ಈ ಯೋಜನೆಯನ್ನು ಕೈಬಿಡುವಂತೆ ಆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಆಂಧ್ರದ ಕಾಂಗ್ರೆಸ್‌ ಸದಸ್ಯರು ಇಂದು ಲೋಕಸಭೆಯಲ್ಲಿ ಒತ್ತಾಯಿಸಿದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ನ ವೈ.ಎಸ್‌. ರಾಜಶೇಖರ ರೆಡ್ಡಿ ಅವರು ತುಂಗಾ ಮೇಲ್ದಂಡೆ ಯೋಜನೆಯನ್ನು ಪ್ರಸ್ತಾಪಿಸಿದಾಗ ಅವರ ಬೆಂಬಲಕ್ಕೆ ಆಂಧ್ರದ ಕಾಂಗ್ರೆಸ್‌ ಸದಸ್ಯರೆಲ್ಲರೂ ದನಿಗೂಡಿಸಿದರು. ಆಗ ಕರ್ನಾಟಕದ ಜನತಾದಳದ ಸದಸ್ಯರಿಂದ ತೀವ್ರ ಆಕ್ಷೇಪ ಮತ್ತು ಪ್ರತಿಭಟನೆ ಬಂದಿತು. ಈ ಹಂತದಲ್ಲಿ ಕೆಲ ನಿಮಿಷ ರಾಜ್ಯಗಳ ಸದಸ್ಯರ ನಡುವೆ ಸ್ವಲ್ಪ ಹೊತ್ತು ಮಾತಿನ ಚಕಮಕಿ ನಡೆಯಿತು.

ಬೃಹತ್‌ ಉದ್ಯಮ ಸ್ಥಾಪನೆಗೆ ಅಡ್ಡಿ ಬೇಡ: ಪಟೇಲ್‌

ಮಂಗಳೂರು, ಮೇ 13– ‘ದಕ್ಷಿಣ ಕನ್ನಡಕ್ಕೆ ಬೃಹತ್‌ ಕೈಗಾರಿಕೆಗಳು ಬರುವುದಕ್ಕೆ ಅಡ್ಡಿಪಡಿಸಬೇಡಿ, ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳು ಅನಿವಾರ್ಯ’ ಎಂದು ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ಪರಿಸರವಾದಿಗಳಿಗೆ ಇಂದು ವಿನಂತಿ ಮಾಡುವುದರೊಂದಿಗೆ ಬೃಹತ್‌ ಕೈಗಾರಿಕೆಗಳ ಸ್ಥಾಪನೆ ವಿಚಾರದಲ್ಲಿ ಸರ್ಕಾರಕ್ಕೆ ಇರುವ ಬದ್ಧತೆಯನ್ನು ಪುನರುಚ್ಚರಿಸಿದರು.

ಸುರತ್ಕಲ್‌ನ ಕರ್ನಾಟಕದ ರೀಜನಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬೋಧನಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT