ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ: ಶಂಕರ್ ಬದಲಾವಣೆಯಿಂದ ದಳದಲ್ಲಿ ಹೊಸ ಬಿಕ್ಕಟ್ಟು

Published 16 ಜನವರಿ 2024, 21:09 IST
Last Updated 16 ಜನವರಿ 2024, 21:09 IST
ಅಕ್ಷರ ಗಾತ್ರ

ಶಂಕರ್ ಬದಲಾವಣೆಯಿಂದ ದಳದಲ್ಲಿ ಹೊಸ ಬಿಕ್ಕಟ್ಟು

ಬೆಂಗಳೂರು, ಜ. 16– ಜನತಾದಳ ರಾಜ್ಯ ಘಟಕದ ಅಧ್ಯಕ್ಷ ಬಿ.ಎಲ್. ಶಂಕರ್
ಅವರನ್ನು ದಿಢೀರನೆ ಬದಲಿಸಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧ್ಯಕ್ಷ ಸ್ಥಾನದ ಹೆಚ್ಚುವರಿ ಹೊಣೆಗಾರಿಕೆ ಕೊಟ್ಟಿರುವುದು ದಳದ ಹೊಸ ಬಿಕ್ಕಟ್ಟಿಗೆ ಹಾಗೂ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆಯ ಪ್ರಸ್ತಾವಕ್ಕೆ ಹೊಸ ಚಾಲನೆ ನೀಡಿರುವಂತಿದೆ.

ಭಿನ್ನಮತೀಯ ಶಾಸಕರೊಂದಿಗೆ ಗುರುತಿಸಿಕೊಂಡು ಮಾಜಿ ಪ್ರಧಾನಿ
ಎಚ್‌.ಡಿ.ದೇವೇಗೌಡರ ‘ಹೊಸ ಶಿಷ್ಯ’ರಾಗಿ ದೀಕ್ಷೆ ಪಡೆದ ಸಿದ್ದರಾಮಯ್ಯನವರಿಗೆ ಅಧ್ಯಕ್ಷ ಸ್ಥಾನ ದೊರೆತಿರುವುದು ಅವರ ಪಾಲಿಗೆ ಸಂಕ್ರಾಂತಿಯ ಉಡುಗೊರೆ.

ಆದರೆ ಇದರಿಂದ ಭಿನ್ನಮತ ಪೂರ್ತಿ ತಣ್ಣಗಾಗುವ ಬದಲು ಮತ್ತೆ ತಲೆ ಎತ್ತುತ್ತಿರು ವುದು ಜನತಾದಳ ‘ಜಗಳದ ಪಕ್ಷ’ವೆಂಬ ಜನಾಭಿಪ್ರಾಯವನ್ನು ಮತ್ತೊಮ್ಮೆ ಸಾಬೀತು ಮಾಡುತ್ತಿದೆ. ಪಕ್ಷದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಉತ್ಸಾಹಿ ಯುವ ನಾಯಕ ಶಂಕರ್ ಅವರನ್ನು ವಿನಾಕಾರಣ ಪದಚ್ಯುತ
ಗೊಳಿಸಿರುವುದು ಒಕ್ಕಲಿಗ ನಾಯಕರನ್ನು ಕೆರಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT