ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ ಈ ದಿನ: ಸತ್ಯಕಾಮ ಇನ್ನಿಲ್ಲ

Published 20 ಅಕ್ಟೋಬರ್ 2023, 18:35 IST
Last Updated 20 ಅಕ್ಟೋಬರ್ 2023, 18:35 IST
ಅಕ್ಷರ ಗಾತ್ರ

ದೇವೇಗೌಡ–ಪಟೇಲ್ ಬಣ ಸಜ್ಜು

ಬೆಂಗಳೂರು, ಅ. 20– ರಾಜ್ಯ ಜನತಾದಳದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಬೆಂಬಲಿಗರ ಗುಂಪುಗಳು ಬಲಾಬಲ ಪ್ರದರ್ಶನಕ್ಕೆ ಸಜ್ಜಾಗುತ್ತಿವೆ. 

ಕಳೆದ ಎರಡು ದಿನಗಳಲ್ಲಿ ದಳದ ಎರಡೂ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಪಕ್ಷದ ಶಾಸಕರ ಮನವೊಲಿಸಿ ತಮ್ಮತ್ತ ಸೆಳೆದುಕೊಳ್ಳುವ ಕಾರ್ಯವನ್ನು ಎರಡೂ ಗುಂಪಿನವರು
ಮುಂದುವರಿಸಿದ್ದಾರೆ. 

ಚದುರಂಗರ ಅಂತ್ಯಕ್ರಿಯೆ

ಮೈಸೂರು, ಅ. 20– ಸೋಮವಾರ ಸಂಜೆ ಇಲ್ಲಿ ನಿಧನರಾದ ಖ್ಯಾತ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಚದುರಂಗ (84) ಅವರ ಅಂತ್ಯಸಂಸ್ಕಾರವನ್ನು ಚಾಮುಂಡಿ ಬೆಟ್ಟದ ತಪ್ಪಲಿನ ವಿದ್ಯುತ್ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿಸಲಾಯಿತು. 

ಸತ್ಯಕಾಮ ಇನ್ನಿಲ್ಲ

ಬೆಂಗಳೂರು, ಅ. 20– ಮಂತ್ರ ತಂತ್ರಗಳನ್ನೆಲ್ಲಾ ವಸ್ತುವನ್ನಾಗಿಸಿಕೊಂಡು ವಿನೂತನ ಶೈಲಿಯ ಕಥೆ ಮತ್ತು ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಧಾರೆ ಎರೆದಿದ್ದ ಸ್ವಾತಂತ್ರ್ಯ ಹೋರಾಟಗಾರ ಸತ್ಯಕಾಮ (ಅನಂತ ಕೃಷ್ಣ ಶಹಾಪೂರ) ಅವರು ಇಂದು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT