ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಭಾಗವತ್‌ ಆರೋಪ: ಲೋಕಸಭೆ ಚರ್ಚೆಗೆ ಉಭಯ ಪಕ್ಷಗಳ ಸಮ್ಮತಿ

Published 11 ಮಾರ್ಚ್ 2024, 23:49 IST
Last Updated 11 ಮಾರ್ಚ್ 2024, 23:49 IST
ಅಕ್ಷರ ಗಾತ್ರ

ನವದೆಹಲಿ, ನೌಕಾಪಡೆಯ ಉಚ್ಚಾಟಿತ ಮುಖ್ಯಸ್ಥ ಅಡ್ಮಿರಲ್‌ ವಿಷ್ಣು ಭಾಗವತ್‌ ಅವರು ಮಾಡಿರುವ ಭ್ರಷ್ಟಾಚಾರದ ಆಪಾದನೆಗಳನ್ನು ಮತದಾನವಿಲ್ಲದ ಗುತ್ತುವಳಿ ಮೂಲಕ ಲೋಕಸಭೆಯಲ್ಲಿ ಚರ್ಚಿಸಲು ಸರ್ಕಾರ ಹಾಗೂ ವಿರೋಧ ಪಕ್ಷಗಳು ಇಂದು ಸಮ್ಮತಿಸಿವೆ.

ಆದರೆ ಅವರನ್ನು ವಜಾ ಮಾಡಿದ್ದ ಬಗ್ಗೆ ಸದಸದಲ್ಲಿ ಚರ್ಚೆ ಮಾಡಬಹುದೇ ಎಂಬುದನ್ನು ತೀರ್ಮಾನಿಸಲು ಹತ್ತು ಮಂದಿಯ ಸಂಸದೀಯ ಸಮಿತಿಯನ್ನು ನೇಮಿಸಲು ತೀರ್ಮಾನಿಸಲಾಗಿದೆ.

ಯುಟಿಐ ಷೇರುಗಳ ಮರುಖರೀದಿ ಹಾಗೂ ಕಬ್ಬಿಣದ ಬೆಲೆ ನಿಗದಿ ಮಾಡುವಾಗ ಸರ್ಕಾರ ಕೆಲವು ಉದ್ಯಮ ಸಂಸ್ಥೆಗಳಿಗೆ ಪಕ್ಷಾಪಾತ ಮಾಡಿದೆ ಎಂಬ ಹಣಕಾಸು ಸಚಿವ ಯಶವಂತ ಸಿನ್ಹಾ ಅವರ ಮಾಜಿ ಸಲಹೆಗಾರ ಮೋಹನ್‌ ಗುರುಸ್ವಾಮಿ ಅವರು ಮಾಡಿರುವ ಆಪಾದನೆಗಳನ್ನು ಸದನದಲ್ಲಿ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವೀರಪ್ಪನ್‌ಗಾಗಿ 18 ಕೋಟಿ ವೆಚ್ಚ

ಬೆಂಗಳೂರು, ಕುಖ್ಯಾತ ಕಾಡುಗಳ್ಳ ವೀರಪ್ಪನ್‌ನನ್ನು ಹಿಡಿಯಲು ಇದುವರೆಗೆ ಸುಮಾರು ರೂ. 18 ಕೋಟಿ ವೆಚ್ಚವಾಗಿದೆ ಎಂದು ಗೃಹ ಸಚಿವ ಪಿ.ಜಿ.ಆರ್‌. ಸಿಂಧ್ಯ ಅವರು ಇಂದು ವಿಧಾನ ಪರಿಷತ್ತಿಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT