ಮಂಗಳವಾರ, ನವೆಂಬರ್ 29, 2022
29 °C

25 ವರ್ಷಗಳ ಹಿಂದೆ 8.10.1997, ಬುಧವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊನೆಗೂ ನಿಗದಿತ ಕಕ್ಷೆ ಸೇರಿದ ಐಆರ್‌ಎಸ್‌–1ಡಿ ಉಪಗ್ರಹ

ಬೆಂಗಳೂರು, ಅ. 7– ಕಳೆದ ವಾರ ಬಾಹ್ಯಾಕಾಶಕ್ಕೆ ಹಾರಿಬಿಡಲಾದ ಐಆರ್‌ಎಸ್‌–1ಡಿ ಉಪಗ್ರಹವನ್ನು ಕಾರ್ಯನಿರ್ವಹಣಾ ಕಕ್ಷೆಗೆ ಸೇರಿಸುವಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಇಂದು ಯಶಸ್ವಿಯಾದರು.

ಸ್ವದೇಶಿ ನಿರ್ಮಿತ ಉಪಗ್ರಹ ವಾಹಕ ‍‍ಪಿಎಸ್‌ಎಲ್‌ಎ ಮೂಲಕ ಗಗನಕ್ಕೆ ಚಿಮ್ಮಲಾಗಿದ್ದ ಐಆರ್‌ಎಸ್‌–1ಡಿ ಅನ್ನು ಕಾರ್ಯನಿರ್ವಹಣಾ ಕಕ್ಷೆಗೆ ಸೇರಿಸಲು ನಿನ್ನೆಯವರೆಗೆ ಇಸ್ರೊ ವಿಜ್ಞಾನಿಗಳು ವಿಫಲರಾಗಿದ್ದರು.‌

ರಕ್ಷಣಾ ಒಪ್ಪಂದ ವಿಸ್ತರಣೆಗೆ ರಷ್ಯಾ ಒಪ್ಪಿಗೆ

ಮಾಸ್ಕೊ, ಅ. 7 (ಎಪಿ): ಭಾರತ ಮತ್ತು ರಷ್ಯಾ ನಡುವಿನ ಬಹುಕಾಲದ ರಕ್ಷಣಾ ಒ‍ಪ್ಪಂದವನ್ನು ವಿಸ್ತರಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ.

ರಕ್ಷಣಾ ಸಚಿವ ಮುಲಾಯಂ ಸಿಂಗ್‌ ಯಾದವ್‌ ಅವರು ರಷ್ಯಾ ಭೇಟಿಯ ಸಂದರ್ಭದಲ್ಲಿ ರಷ್ಯಾದ ರಕ್ಷಣಾ ಇಲಾಖೆಯ ಜನರಲ್‌ ಐಗೊರ್‌ ಸರ್ಜ್‌ಯೊಬ್‌ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರವನ್ನು ಜಂಟಿಯಾಗಿ ಪ್ರಕಟಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು