ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಬುಧವಾರ 27-3-1996

Last Updated 26 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಎಂಸಿಎಫ್ ಬಿಕ್ಕಟ್ಟು ಅಂತ್ಯ: 29ರಿಂದ ಉತ್ಪಾದನೆ

ಮಂಗಳೂರು, ಮಾರ್ಚ್ 26– ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಇಂದು ನಡೆದ ಸಭೆಯಲ್ಲಿ, ಇಲ್ಲಿಯ ಮಂಗಳೂರು ರಸಗೊಬ್ಬರ ಕಾರ್ಖಾನೆಯ ಮುಷ್ಕರನಿರತ ಕಾರ್ಮಿಕರು ಕೆಲಸಕ್ಕೆ ಹಾಜರಾಗಲು ಒಪ್ಪಿಕೊಂಡಿದ್ದು, ಆಡಳಿತ ಮಂಡಳಿಯು ಈ ಹಿಂದೆ ವಜಾ ಮಾಡಿದ್ದ ಆರು ಮಂದಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಒಪ್ಪಿಗೆ ನೀಡಿದೆ.

ಕಳೆದ ಮೂರು ತಿಂಗಳಿನಿಂದ ಹಲವು ಸಮಸ್ಯೆಗಳನ್ನು ಎದುರಿಸಿ ರಸಗೊಬ್ಬರ ಉತ್ಪಾದನೆಯನ್ನು ಅನಿವಾರ್ಯವಾಗಿ ನಿಲ್ಲಿಸಿದ್ದ ಕಾರ್ಖಾನೆಯು ಈ ತಿಂಗಳ 29ರಿಂದ ಮತ್ತೆ ಆರಂಭವಾಗಲಿದೆ ಎಂದು ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.

ರಾಜ್ಯ ರೈತ ಸಂಘ ಇಬ್ಭಾಗ ಸಂಭವ

ಬೆಂಗಳೂರು, ಮಾರ್ಚ್ 26– ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆಗೆ ರಾಜ್ಯ ರೈತ ಸಂಘದ ಕೆಲ ಪ್ರಮುಖರು ಮುಂದಾಗಿದ್ದು, ಇದರಿಂದ ರೈತ ಸಂಘ ಹೋಳಾಗುವ ಸಾಧ್ಯತೆಗಳು ದಟ್ಟವಾಗಿವೆ.

ರೇಖೆಗಳಲ್ಲಿ ಜಗತ್ತು ಕಂಡ ಹೆಬ್ಬಾರ ಇನ್ನಿಲ್ಲ

ಬೆಂಗಳೂರು, ಮಾರ್ಚ್ 26– ಸರಳ ರೇಖಾ ಚಿತ್ರಗಳಲ್ಲಿ ಬದುಕಿನ ದಟ್ಟ ಚಿತ್ರಣ ನೀಡಿದ, ನಾಡಿನ ಸಮಕಾಲೀನ ಕಲೆಗೆ ರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟ ಅನುಭಾವಿ ಕಲಾಕಾರ ಕಟ್ಟಂಗೇರಿ ಕೃಷ್ಣ ಹೆಬ್ಬಾರರು (85) ಇಂದು ಸಂಜೆ ಮುಂಬೈನ ಅವರ ಮಗಳ ನಿವಾಸದಲ್ಲಿ ಕೊನೆ ಉಸಿರೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT