ಬಿಜೆಪಿ ವಿಫಲ: ರಂಗ, ಕಾಂಗ್ರೆಸ್ ಜತೆ ರಾಷ್ಟ್ರಪತಿ ಇಂದು ಚರ್ಚೆ
ನವದೆಹಲಿ, ಮಾರ್ಚ್ 12– ಬಹುಮತಕ್ಕೆ ಅಗತ್ಯವಾದಷ್ಟು ಸದಸ್ಯರ ಬೆಂಬಲದ ಪುರಾವೆಯನ್ನು ಒದಗಿಸಲು ಇಂದು ಬಿಜೆಪಿ ವಿಫಲವಾದ ಹಿನ್ನೆಲೆಯಲ್ಲಿ, ಸರ್ಕಾರ ರಚನೆ ಸಾಧ್ಯತೆ ಕುರಿತು ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಕಾಂಗ್ರೆಸ್, ಸಂಯುಕ್ತ ರಂಗ ಮತ್ತು ಎಡರಂಗದ ನಾಯಕರ ಜತೆ ನಾಳೆ ಚರ್ಚಿಸಲು ಇಂದು ರಾತ್ರಿ ನಿರ್ಧರಿಸುವುದರೊಂದಿಗೆ ರಾಜಧಾನಿಯ ರಾಜಕೀಯ ಹೊಸ ತಿರುವು ಪಡೆಯಿತು.

ಎಐಎಡಿಎಂಕೆಯು ಕೆಲವು ಪೂರ್ವ ಷರತ್ತುಗಳನ್ನು ಹಾಕಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ 27 ಮಂದಿ ಸದಸ್ಯರ ಬೆಂಬಲ ಪಡೆಯುವಲ್ಲಿ ವಿಫಲರಾಗಿರುವ ಬಿಜೆಪಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಕೇವಲ 240 ಮಂದಿಯ ಬೆಂಬಲದ ಪುರಾವೆ ಪತ್ರಗಳನ್ನು ಇಂದು ರಾತ್ರಿ ರಾಷ್ಟ್ರಪತಿ ಅವರಿಗೆ ಸಲ್ಲಿಸಿದರು. ಬಿಜೆಪಿ ನಾಯಕರೊಂದಿಗೂ ರಾಷ್ಟ್ರಪತಿ ಅವರು ಮಾತುಕತೆ ಮುಂದುವರಿಸುತ್ತಾರೆ ಎಂದು ಇಂದು ರಾತ್ರಿ ಹೊರಡಿಸಲಾದ ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

ಅಸ್ಥಿರತೆಗೆ ಬಿಜೆಪಿಯೇ ಕಾರಣ: ಜಯಲಲಿತಾ
ಚೆನ್ನೈ, ಮಾರ್ಚ್ 12 (ಪಿಟಿಐ)- ಕೇಂದ್ರದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆಗೆ ಬಿಜೆಪಿಯೇ ಹೊಣೆ. ತಮ್ಮ ಪಕ್ಷ ಮುಂದಿಟ್ಟಿರುವ ಬೇಡಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವುದೇ ಬಿಕ್ಕಟ್ಟಿಗೆ ಕಾರಣ ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ದೂಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.