ಬಿಜೆಪಿಗೆ ಬೆಂಬಲ: ಜಯಾ ಅಂತಿಮ ನಿರ್ಧಾರ ಇಂದು
ಚೆನ್ನೈ, ಮಾರ್ಚ್ 13 (ಪಿಟಿಐ)– ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಬೆಂಬಲ ವ್ಯಕ್ತಪಡಿಸುವ ಕುರಿತಂತೆ ತಮ್ಮ ನಿರ್ಧಾರವನ್ನು ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ನಾಳೆ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.
ಬೆಂಬಲ ಪತ್ರವನ್ನು ನೀಡುವ ಕುರಿತಂತೆ ಬಿಕ್ಕಟ್ಟು ನನೆಗುದಿಗೆ ಬಿದ್ದಿದ್ದರೂ ಜಯಾ ಅವರು ತಮ್ಮ ನಿರ್ಧಾರವನ್ನು ನಾಳೆ ಪ್ರಕಟಿಸುವರು ಎಂದು ಪಕ್ಷದ ಮೂಲಗಳು ಹೇಳಿವೆ. ರಾಷ್ಟ್ರೀಯ ಆದ್ಯತಾ ಪಟ್ಟಿ ರಚನೆಗೆ ನಾಳೆ ದೆಹಲಿಯಲ್ಲಿ ನಡೆಯುವ ಬಿಜೆಪಿ ಮೈತ್ರಿಕೂಟದ ಸಭೆಯಲ್ಲಿ ಜಯಾ ಅವರು ಪಾಲ್ಗೊಳ್ಳುವ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ.
ಸ್ವತಃ ಸರ್ಕಾರ ರಚನೆ: ಮನವಿ ಸಲ್ಲಿಸದ ಕಾಂಗ್ರೆಸ್, ರಂಗ
ನವದೆಹಲಿ, ಮಾರ್ಚ್ 13– ಕೇಂದ್ರದಲ್ಲಿ ನೂತನ ಸರ್ಕಾರ ರಚನೆಗಾಗಿ ರಾಷ್ಟ್ರಪತಿ ಅವರು ಇಂದು ಕಾಂಗ್ರೆಸ್ ಮತ್ತು ಸಂಯುಕ್ತ ರಂಗದ ನಾಯಕರನ್ನು ಆಮಂತ್ರಿಸಿ ಮಾತನಾಡಿದರಾದರೂ, ಈ ಉಭಯ ಬಣಗಳ ನಾಯಕರು ಸರ್ಕಾರ ರಚನೆಗೆ ಮನವಿ ಸಲ್ಲಿಸಿಲ್ಲ.
ತಮಗೆ ಕಾಲಾವಕಾಶ ಕೊಡಬೇಕೆಂದು ಸಂಯುಕ್ತ ರಂಗ ಮನವಿ ಮಾಡಿದರೆ, ತಮ್ಮ ಮಿತ್ರ ಪಕ್ಷಗಳು ಹಾಗೂ ಇತರರ ಜತೆ ಸಮಾಲೋಚನೆ ನಡೆಸಿದ ನಂತರ ಸರ್ಕಾರ ರಚನೆಗೆ ಪರಿಶೀಲಿಸುವುದಾಗಿ ರಾಷ್ಟ್ರಪತಿ ಅವರಿಗೆ ಕಾಂಗ್ರೆಸ್ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.