ಶ್ರೀನಗರ, ಆ. 6 (ಯುಎನ್‌ಐ, ಪಿಟಿಐ)– ಜಮ್ಮು ಮತ್ತು ಕಾಶ್ಮೀರ ಜಿಲ್ಲೆಯ ಕುಪ್ವಾರದ ನಟ್ಯುಷಾ ಗ್ರಾಮದಲ್ಲಿರುವ ಸೇನಾ ಶಿಬಿರದ ಮೇಲೆ ರಾತ್ರಿ ದಾಳಿ ನಡೆಸಿರುವ ಉಗ್ರಗಾಮಿಗಳು, ಕನಿಷ್ಠ ಐವರು ಸೇನಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಆರು ಮಂದಿ ಉಗ್ರರು ಸಹ ಸತ್ತಿದ್ದಾರೆ.