ಕ್ಷಿಪಣಿ ನಾಶ ಸಾಮರ್ಥ್ಯದ ‘ಆಕಾಶ್’ ಪ್ರಯೋಗ

ಚಂಡೀಪುರ (ಒರಿಸ್ಸಾ), ಸೆ. 30 (ಪಿಟಿಐ)– ಭೂಮಿಯಿಂದಲೇ ಶತ್ರು ವಿಮಾನಗಳ ಮೇಲೆ ದಾಳಿ ನಡೆಸಲು ಶಕ್ತವಾದ ‘ಆಕಾಶ್’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಇಂದು ಯಶಸ್ವಿಯಾಗಿ ನಡೆಸಿತು.

ಪೈಲಟ್‌ರಹಿತ ನಿಶಾಂತ್ ಯುದ್ಧ ತರಬೇತಿ ವಿಮಾನವನ್ನು ಹೊಡೆದು ಉರುಳಿಸಿದ ಆಕಾಶ್, ಸುಮಾರು 25 ಕಿ.ಮೀ. ಎತ್ತರದಲ್ಲಿ ಹಾರಾಡುವ ಶತ್ರು ಕ್ಷಿಪಣಿಗಳನ್ನು ಕೂಡ ಹೊಡೆದು ಉರುಳಿಸಲು ತಾನು ಸಮರ್ಥ ಎಂದು ತೋರಿಸಿಕೊಟ್ಟಿತು.

ಜಪಾನ್: ಅಣು ಸ್ಥಾವರದಲ್ಲಿ ಅಪಘಾತ

ಟೋಕಿಯೊ, ಸೆ. 30– ಟೊಕಾಯಿಮುರಾ ಎಂಬಲ್ಲಿ ಪರಮಾಣು ಇಂಧನ ಸಂಸ್ಕರಣ ಸ್ಥಾವರವೊಂದರಲ್ಲಿ ಅಪಘಾತವುಂಟಾಗಿ ಸುರಕ್ಷಾ ಮಟ್ಟಕ್ಕಿಂತ 4,000 ಪಟ್ಟು ವಿಕಿರಣ ಹೊರಹೊಮ್ಮಿದೆ.

ಇದು ಜಪಾನ್‌ನ ಈವರೆಗಿನ ಅತ್ಯಂತ ದುರ್ಭರ ಅಪಘಾತ. ಸ್ಥಾವರಕ್ಕೆಂದು ಯುರೇನಿಯಂ ಇಂಧನವನ್ನು ಸಂಸ್ಕರಿಸುವಲ್ಲಿ ಈ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ವಿಕಿರಣ ಜ್ವಾಲೆಗೆ ಸಿಕ್ಕಿದ 19 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಮೀಪದ 50 ಮನೆಗಳ ತೆರವಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.