ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

25 ವರ್ಷಗಳ ಹಿಂದೆ | ಭಾರಿ ರೈಲು ದುರಂತ, 500ಕ್ಕೂ ಹೆಚ್ಚು ಸಾವು

Published 2 ಆಗಸ್ಟ್ 2024, 23:33 IST
Last Updated 2 ಆಗಸ್ಟ್ 2024, 23:33 IST
ಅಕ್ಷರ ಗಾತ್ರ

ಭಾರಿ ರೈಲು ದುರಂತ, 500ಕ್ಕೂ ಹೆಚ್ಚು ಸಾವು

ಗೈಸಲ್ (ಪಶ್ಚಿಮ ಬಂಗಾಳ), ಆ. 2 (ಪಿಟಿಐ, ಯುಎನ್‌ಐ)– ರಾಷ್ಟ್ರದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಎನ್ನಲಾದ ರೈಲ್ವೆ ದುರಂತ ಪಶ್ಚಿಮ ಬಂಗಾಳದ ಉತ್ತರ ದಿನಜ್‌ಪುರ ಜಿಲ್ಲೆಯ ಗೈಸಲ್ ರೈಲ್ವೆ ನಿಲ್ದಾಣದ ಸಮೀಪ ಇಂದು ಮುಂಜಾನೆ ಸಂಭವಿಸಿದ್ದು, ರಕ್ಷಣಾ ಪಡೆಯ 90 ಸಿಬ್ಬಂದಿ ಸೇರಿದಂತೆ ಕನಿಷ್ಠ ಪಕ್ಷ 500 ಜನರು ಸತ್ತಿದ್ದಾರೆ. ದುರ್ಘಟನೆಯಲ್ಲಿ ಸುಮಾರು 750 ಜನರು ಗಾಯಗೊಂಡಿದ್ದಾರೆ.

ಮುಖಾಮುಖಿ ಡಿಕ್ಕಿ ಹೊಡೆದ, ದೆಹಲಿಗೆ ತೆರಳುತ್ತಿದ್ದ ‘ಬ್ರಹ್ಮಪುತ್ರ ಮೇಲ್‌’ (4055) ಮತ್ತು ಗುವಾಹತಿಗೆ ತೆರಳುತ್ತಿದ್ದ ‘ಅವಧ್–ಅಸ್ಸಾಂ ಎಕ್ಸ್‌ಪ್ರೆಸ್‌’ (5610) ರೈಲುಗಳ ನಜ್ಜುಗುಜ್ಜಾದ ಬೋಗಿಗಳಿಂದ ಈವರೆಗೆ 275 ಶವಗಳನ್ನು ಹೊರತೆಗೆಯಲಾಗಿದೆ. ಇನ್ನೂ ನೂರಾರು ಜನರು ಬೋಗಿಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆಂದು ಶಂಕಿಸಲಾಗಿದೆ.

ಗೈಸಲ್ ರೈಲು ನಿಲ್ದಾಣದಲ್ಲಿ ಈ ಎರಡೂ ರೈಲುಗಳಿಗೆ ತಡೆ ಇರಲಿಲ್ಲ. ಅವು ಬೇರೆ ಬೇರೆ ಮಾರ್ಗಗಳಲ್ಲಿ ಸಂಚರಿಸುತ್ತಿವೆ ಎಂದು ಭಾವಿಸಿದ್ದು ದುರಂತಕ್ಕೆ ಕಾರಣ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದಳದ ಜತೆ ಮೈತ್ರಿ ಇಲ್ಲ: ರಾಜ್ಯ ಬಿಜೆಪಿ ನಿರ್ಧಾರ

ಬೆಂಗಳೂರು, ಆ. 2– ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ನೇತೃತ್ವದ ಜನತಾದಳದ ಜತೆ ಯಾವುದೇ ರೀತಿಯಲ್ಲಿ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳದೆ ಇರುವ ತನ್ನ ಹಿಂದಿನ ನಿರ್ಧಾರಕ್ಕೇ ಬದ್ಧವಾಗಿರಲು ರಾಜ್ಯ ಬಿಜೆಪಿ ನಿರ್ಧರಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT