ದಳ ಚಿಹ್ನೆ ವಿವಾದ: ಲಿಖಿತ ದಾಖಲೆ ಸಲ್ಲಿಕೆಗೆ 6ರವರೆಗೆ ಕಾಲಾವಕಾಶ
ಪ್ರಜಾವಾಣಿ ವಾರ್ತೆ, ನವದೆಹಲಿ, ಆಗಸ್ಟ್ 3– ಜನತಾದಳವು ಇಬ್ಭಾಗವಾಗಿ, ತನ್ನದೇ ನಿಜವಾದ ದಳ ಎಂದು ಪಕ್ಷದ ಚಿಹ್ನೆಯ ಸಂಬಂಧ ಚುನಾವಣಾ ಆಯೋಗವು ಇಂದು ಎರಡು ಬಣಗಳ ವಾದ ಆಲಿಸಿ ಈ ಬಗೆಗೆ ಲಿಖಿತ ದಾಖಲೆ ಸಲ್ಲಿಕೆಗೆ 6ರವರೆಗೆ ಕಾಲಾವಕಾಶ ನೀಡಿತು. ಶರದ್ ಯಾದವ್ ಪರ ಸುಪ್ರೀಂ ಕೋರ್ಟ್ ವಕೀಲ ಸಾಂಘ್ವಿ ಮತ್ತು ರಾಮ್ ವಿಲಾಸ್ ಪಾಸ್ವಾನ್ ಹಾಗೂ ಎಚ್.ಡಿ. ದೇವೇಗೌಡ ನೇತೃತ್ವದ ಬಣದ ಪರ ಸುಪ್ರೀಂ ಕೋರ್ಟ್ ವಕೀಲ ಎ.ಎಸ್. ಆನಂದ್ ತಮ್ಮ ವಾದ ಮಂಡಿಸಿದರು.