ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, ಅಕ್ಟೋಬರ್ 29, 1996

Last Updated 28 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಅಂಚೆ ಮುಷ್ಕರ: ಇಂದುಪರಿಹಾರ ನಿರೀಕ್ಷೆ
ನವದೆಹಲಿ, ಅ. 28 (ಪಿಟಿಐ):
ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್ ನೀಡುವ ವಿಷಯ ಚರ್ಚೆಗೆ ಬರಲಿದ್ದು, ಮುಷ್ಕರನಿರತ 20 ಲಕ್ಷ ಕೇಂದ್ರ ಸರ್ಕಾರಿ ನೌಕರರ (ಅವರಲ್ಲಿ ಅರ್ಧದಷ್ಟು ಅಂಚೆ ಮತ್ತು ದೂರಸಂಪರ್ಕ ಇಲಾಖೆಯ ನೌಕರರು) ಮುಷ್ಕರಕ್ಕೆ ಪರಿಹಾರ ದೊರೆಯುವ ನಿರೀಕ್ಷೆ ಇದೆ.

ಅಂಚೆ ಮತ್ತು ದೂರಸಂಪರ್ಕ ಇಲಾಖೆಯ ನೌಕರರು ದೇಶದಾದ್ಯಂತ ನಡೆಸು ತ್ತಿರುವ ಮುಷ್ಕರ ಇಂದು ಆರನೇ ದಿನ ತಲುಪಿದ್ದು, ಅಂಚೆ ಮತ್ತು ಮಾನವಚಾಲಿತ ದೂರಸಂಪರ್ಕ ಸೇವೆ ಇಂದೂ ಕೂಡಾ ಮುಷ್ಕರದಿಂದ ಅಸ್ತವ್ಯಸ್ತವಾಗಿದೆ.

ಆಲಮಟ್ಟಿ: ವಿಚಾರಣೆ 97ಕ್ಕೆ
ನವದೆಹಲಿ, ಅ. 28:
ಕರ್ನಾಟಕ ಮತ್ತು ಆಂಧ್ರಪ್ರದೇಶದ ಮಧ್ಯೆ ನಡೆಯುತ್ತಿ ರುವ ಆಲಮಟ್ಟಿ ಅಣೆಕಟ್ಟು ವಿವಾದ ಕುರಿತ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು 4 ತಿಂಗಳುಗಳ ಕಾಲ ಮುಂದೂಡಿತು.

ಪ್ರಸಕ್ತ ವಿವಾದವನ್ನು ಎರಡು ರಾಜ್ಯಗಳು ತಮ್ಮತಮ್ಮೊಳಗೇ ಪರಿಹರಿಸಿಕೊಳ್ಳಬೇಕು ಎಂದು ಆಂಧ್ರ ಪ್ರದೇಶದ ಹೈಕೋರ್ಟ್ಸೆ. 11ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಆರ್. ಕೃಷ್ಣ ಅಯ್ಯರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿ ಗಳಾದ ಎನ್.ಪಿ. ಸಿಂಗ್ ಹಾಗೂ ಫೈಜಾನುದ್ದೀನ್ ಅವರನ್ನೊಳಗೊಂಡಿರುವ ವಿಭಾಗೀಯ ಪೀಠ ವಿಚಾರಣೆಯನ್ನು 1997ರ ಫೆಬ್ರುವರಿ ಮೊದಲ ವಾರಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT