ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಬಿಹಾರದಲ್ಲಿ ನಿಲ್ಲದ ಹತ್ಯಾಕಾಂಡ ಉಗ್ರರ ದಾಳಿಗೆ 34 ಜನರ ಬಲಿ

Published 20 ಮಾರ್ಚ್ 2024, 0:18 IST
Last Updated 20 ಮಾರ್ಚ್ 2024, 0:18 IST
ಅಕ್ಷರ ಗಾತ್ರ

ಬಿಹಾರದಲ್ಲಿ ನಿಲ್ಲದ ಹತ್ಯಾಕಾಂಡ ಉಗ್ರರ ದಾಳಿಗೆ 34 ಜನರ ಬಲಿ

ಸೆನಾರಿ (ಜೆಹಾನಾಬಾದ್‌), ಮಾರ್ಚ್ 19 (ಪಿಟಿಐ)– ಬಿಹಾರದ ಜೆಹಾನಾಬಾದ್ ಜಿಲ್ಲೆಯ ಸೆನಾರಿ ಹಳ್ಳಿಗೆ ನಿನ್ನೆ ರಾತ್ರಿ ನಿಷೇಧಿತ ಮಾವೊವಾದಿ ಕಮ್ಯುನಿಸ್ಟ್ ಸೆಂಟರ್‌ಗೆ (ಎಂಸಿಸಿ)ಸೇರಿದ ಸುಮಾರು ಒಂದು ಸಾವಿರ ಮಂದಿ ಕಾರ್ಯಕರ್ತರು ಶಸ್ತ್ರಗಳಿಂದ ಸಜ್ಜಿತರಾಗಿ ದಾಳಿಯಿಟ್ಟು ಮೇಲ್ವರ್ಗಕ್ಕೆ ಸೇರಿದ 34 ಮಂದಿಯನ್ನು ಕೊಂದುಹಾಕಿದರು.

ರಾಬ್ಡಿದೇವಿ ನೇತೃತ್ವದ ಸರ್ಕಾರ ವಿಶ್ವಾಸಮತ ಗಳಿಸಿದ 24 ತಾಸುಗಳೊಳಗೇ ಸಂಭವಿಸಿದ ಈ ಘಟನೆಯಲ್ಲಿ 35 ಮಂದಿ ಸತ್ತಿದ್ದಾರೆ ಎಂದು ಅಧಿಕೃತ ಮೂಲಗಳು ಮೊದಲು ತಿಳಿಸಿದ್ದವು. ಆದರೆ ಗ್ರಾಮಸ್ಥರ ಪ್ರಕಾರ ಸತ್ತವರ ಸಂಖ್ಯೆ 70.

ಸರ್ಕಾರದ ಅಸ್ಥಿರಕ್ಕೆ ಪ್ರತಿಪಕ್ಷ ಯತ್ನ: ಪ್ರಧಾನಿ ಖಂಡನೆ

ನವದೆಹಲಿ, ಮಾರ್ಚ್ 19 (ಪಿಟಿಐ)– ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂದು ತನ್ನ ಅಧಿಕಾರಾವಧಿಯ ಒಂದು ವರ್ಷವನ್ನು ಪೂರೈಸಿತು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಧಾನಿ ಸಹಿತ ವಿವಿಧೆಡೆ ನಡೆದ ಸಮಾರಂಭಗಳಲ್ಲಿ, ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿ ರುವ ವಿರೋಧ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ವಿಜ್ಞಾನ ಭವನದಲ್ಲಿ ವಿಮಾ ಯೋಜನೆಗಳನ್ನು ಆರಂಭಿಸಿ ಮಾತನಾಡಿದ ಅವರು, ಕೇಂದ್ರದ ಸ್ಥಿರ ಸರ್ಕಾರವನ್ನು ಕಂಡು ವಿರೋಧ ಪಕ್ಷಗಳಿಗೆ ನಡುಕ ಉಂಟಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT