ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಭಾನುವಾರ ಆಗಸ್ಟ್‌ 15, 1996

Last Updated 14 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು, ಆಗಸ್ಟ್‌ 14– ‘ಕೃಷ್ಣಾ ನದಿ ನೀರಿನ ಹಂಚಿಕೆಗೆ ಬಚಾವತ್‌ ಆಯೋಗದ ತೀರ್ಪು ಅಂತಿಮ. ಇದನ್ನು ಯಾರೂ ಉಲ್ಲಂಘಿಸಲು ಸಾಧ್ಯವಿಲ್ಲ. ರಾಜ್ಯದ ಹಿತಕ್ಕೆ ಯಾರಿಂದಲೂ ಧಕ್ಕೆ ಬರುವುದಿಲ್ಲ. ತೀರ್ಪಿನ ಪ್ರಕಾರ ಬಂದಿರುವ ನೀರಿನಲ್ಲಿ ಒಂದೇ ಒಂದು ಹನಿಯನ್ನೂ ನಾವು ಬಿಡುವುದಿಲ್ಲ. ಹಾಗೆಯೇ ಬೇರೆಯವರ ಪಾಲಿನ ಹನಿ ನೀರೂ ನಮಗೆ ಬೇಕಿಲ್ಲ’ ಎಂದು ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರು ಪುನರುಚ್ಚರಿಸಿದರು.

ಪ್ರಧಾನಿ ಎಚ್‌.ಡಿ. ದೇವೇಗೌಡರು ಕಳೆದ ಹತ್ತರಂದು ದೆಹಲಿಯಲ್ಲಿ ಕರೆದಿದ್ದ ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ ನಂತರ ಮಂಗಳವಾರ ಬೆಂಗಳೂರಿಗೆ ಹಿಂತಿರುಗಿದ ಮುಖ್ಯಮಂತ್ರಿಗಳು ವಿಧಾನಪರಿಷತ್ತಿನಲ್ಲಿ ಇಂದು ಅಡ್ಡಿ, ಆಕ್ಷೇಪ– ವಾಗ್ವಾದ, ಆರೋಪ– ಪ್ರತ್ಯಾರೋಪಗಳ ನಡುವೆಯೇ ವಿವರವಾದ ಹೇಳಿಕೆ ನೀಡಿ ‘ಆಲಮಟ್ಟಿ ಕೆಲಸ ನಿಲ್ಲುವುದಿಲ್ಲ. ಯಾರೂ ಕೆಲಸ ನಿಲ್ಲಿಸಲು ಆಗುವುದಿಲ್ಲ’ ಎಂದು ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT