ಪಿವಿಎನ್ ಪುತ್ರನಿಗೆ ಸಿಬಿಐ ಸಮನ್ಸ್

ನವದೆಹಲಿ, ಜೂನ್ 10(ಪಿಟಿಐ)– 133 ಕೋಟಿ ರೂಪಾಯಿ ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಹಾಜರಾಗುವಂತೆ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಪುತ್ರ ವಿ.ಪಿ. ಪ್ರಭಾಕರ ರಾವ್ ಅವರಿಗೆ ಕೇಂದ್ರ ತನಿಖಾ ದಳ(ಸಿಬಿಐ) ಸಮನ್ಸ್ ಜಾರಿಗೊಳಿಸಿದೆ.

ಕೇಂದ್ರದ ಮಾಜಿ ಸಚಿವ ರಾಂ ಲಖನ್ ಸಿಂಗ್ ಯಾದವ್ ಅವರ ಪುತ್ರ ಪ್ರಕಾಶ್ ಚಂದ್ರ ಅವರನ್ನು ಇಂದು ವಿಚಾರಣೆ ಮಾಡಿತು.

ಹಗರಣಕ್ಕೆ ಕಾರಣವಾದ ಹಣವನ್ನು ಇಡಲಾಗಿದೆ ಎನ್ನಲಾದ ಸ್ವಿಸ್ ಬ್ಯಾಂಕಿನ ಖಾತೆ ಸ್ಥಗಿತಕ್ಕೆ ಸಿಬಿಐ ಈಗಾಗಲೇ ಮನವಿ ಮಾಡಿದೆ. ಅಲ್ಲದೆ ಹಗರಣಕ್ಕೆ ಸಂಬಂಧಿಸಿದಂತೆ ಲಂಚ ಜಮಾ ಆಗಿದೆ ಎನ್ನಲಾದ ದುಬೈ, ನ್ಯೂಯಾರ್ಕ್, ಸ್ವಿಟ್ಜರ್‌ಲ್ಯಾಂಡ್ ಮತ್ತು ತುರ್ಕಿಯ ಬ್ಯಾಂಕ್ ಖಾತೆಗಳ ವಿವರಗಳನ್ನು ಒದಗಿಸಬೇಕೆಂಬ ಸಿಬಿಐ ಅಂತರರಾಷ್ಟ್ರೀಯ ಪೊಲೀಸರಿಗೆ ಮನವಿ ಮಾಡಿಕೊಂಡಿದೆ.

ವಿಶ್ವಾಸ ಮತ ಪರೀಕ್ಷೆ ಎದುರಿಸಲು ರಂಗ ಸರ್ಕಾರ ಸಜ್ಜು

ನವದೆಹಲಿ, ಜೂನ್ 10 (ಪಿಟಿಐ, ಯುಎನ್‌ಐ)– ಕೇಂದ್ರದ ಸಚಿವ ಸಂಪುಟ ಇಂದು ಸಂಜೆ ಇಲ್ಲಿ ಸಭೆ ಸೇರಿ ನಾಳೆ ಲೋಕಸಭೆಯಲ್ಲಿ ವಿಶ್ವಾಸಮತ ಪರೀಕ್ಷೆ ಕಾಲದ ಚರ್ಚೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಕುರಿತಾಗಿ ಚರ್ಚೆ ನಡೆಸಿತು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.