ತೈಪೆ, ಸೆ.21 (ರಾಯಿಟರ್ಸ್)– ತೈವಾನ್‌ನಲ್ಲಿ ಈ ಶತಮಾನದಲ್ಲೇ ಅತ್ಯಂತ ಭೀಕರವೆನಿಸಿದ ಭೂಕಂಪ ಇಂದು ನಸುಕಿನಲ್ಲಿ ಸಂಭವಿಸಿ 1,700ಕ್ಕೂ ಹೆಚ್ಚು ಜನ ಸತ್ತಿದ್ದಾರೆ.
ಕಟ್ಟಡಗಳ ಭಗ್ನಾವಶೇಷಗಳಡಿ ಸುಮಾರು ಮೂರು ಸಾವಿರ ಮಂದಿ ಸಿಲುಕಿದ್ದಾರೆ. ಸುಮಾರು 4,000 ಜನರಿಗೆ ಗಾಯಗಳಾಗಿವೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.