ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಯೋಧರ ಅಂಗಾಂಗ ಛಿದ್ರ: ಪಾಕ್‌ಗೆ ಭಾರತ ಖಂಡನೆ

Published 11 ಜೂನ್ 2024, 0:07 IST
Last Updated 11 ಜೂನ್ 2024, 0:07 IST
ಅಕ್ಷರ ಗಾತ್ರ

ಯೋಧರ ಅಂಗಾಂಗ ಛಿದ್ರ: ಪಾಕ್‌ಗೆ ಭಾರತ ಖಂಡನೆ

ನವದೆಹಲಿ, ಜೂನ್‌ 10– ಪಾಕಿಸ್ತಾನದ ಸೈನಿಕರು ಆರು ಮಂದಿ ಭಾರತೀಯ ಯೋಧರ ಕೆಲವು ಅಂಗಾಂಗಗಳನ್ನು ಕತ್ತರಿಸಿದ ದೇಹಗಳನ್ನು ನೀಡಿದ್ದು, ಇದು ಅತ್ಯಂತ ಅಮಾನುಷ ಮತ್ತು ಬರ್ಬರ ಕೃತ್ಯ ಎಂದು ಇಂದು ಭಾರತ ಕಟುವಾಗಿ ಖಂಡಿಸಿದೆ.

ಕಣ್ಮರೆಯಾಗಿದ್ದ ಹದಿನಾಲ್ಕು ಮಂದಿಯಲ್ಲಿ ಈ ಆರು ಮಂದಿ ಯೋಧರು ಪಾಕಿಸ್ತಾನದ ಘೋರ ಕೃತ್ಯಕ್ಕೆ ಒಳಗಾದವರು. ಈ ಅಮಾನುಷ ಕೃತ್ಯವು ಹಿಂದೆಂದೂ ನಡೆದಿಲ್ಲ, ಇದು ಅಂತರರಾಷ್ಟ್ರೀಯ ಸಂಪ್ರದಾಯದ ಉಲ್ಲಂಘನೆಯಾಗಿದೆ ಎಂದು ಭೂಸೇನಾ ಪಡೆಯ ವಕ್ತಾರ ಕರ್ನಲ್‌ ವಿಕ್ರಂ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಇಂದು ಪಾಕಿಸ್ತಾನದ ನಡೆಯನ್ನು ಖಂಡಿಸಿದರು.

ಈ ನಡುವೆ, ಕಾರ್ಗಿಲ್‌ ವಲಯದಿಂದ ಅತಿಕ್ರಮಣಕಾರರನ್ನು ಓಡಿಸುವ ತನಕ ಭಾರತೀಯ ಪಡೆಗಳು ವಿರಮಿಸುವುದಿಲ್ಲ ಎಂದು ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರು ಇಂದು ಪಟ್ನಾದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಆರ್ಥಿಕ ನಿಷೇಧ: ಐದು ವರ್ಷ ಕಾಲ ಸ್ಥಗಿತ

ವಾಷಿಂಗ್ಟನ್‌, ಜೂನ್‌ 10 (ಯುಎನ್‌ಐ)– ಅಣ್ವಸ್ತ್ರ ಸ್ಫೋಟಗಳ ಕಾರಣ ಅಮೆರಿಕವು ಭಾರತ ಹಾಗೂ ಪಾಕಿಸ್ತಾನದ ಮೇಲೆ ಹೇರಿರುವ ಎಲ್ಲಾ ಆರ್ಥಿಕ ನಿಷೇಧಗಳನ್ನು ಐದು ವರ್ಷದ ಅವಧಿಗೆ ರದ್ದುಪಡಿಸುವ ತಿದ್ದುಪಡಿಯೊಂದನ್ನು ಅಮೆರಿಕದ ಸೆನೆಟ್‌ ಅಂಗೀಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT