ಬಿಜೆಪಿ ಜೊತೆ ಲೋಕಶಕ್ತಿ ಚುನಾವಣಾ ಹೊಂದಾಣಿಕೆ
ನವದೆಹಲಿ, ಜ. 9– ಬರುವ ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆಗಾಗಿ ಹುಡುಕಾಟ ನಡೆಸಿ ಗೊಂದಲದಲ್ಲಿ ಸಿಕ್ಕಿದ್ದ ಲೋಕಶಕ್ತಿಯ ನಾಯಕ ರಾಮಕೃಷ್ಣ ಹೆಗಡೆ ಅವರು ಕೊನೆಗೂ ಭಾರತೀಯ ಜನತಾ ಪಕ್ಷದ ಜತೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವ ನಿರ್ಧಾರವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದರು.

ಬಿಜೆಪಿಯ ಅಧ್ಯಕ್ಷ ಲಾಲ್ ಕೃಷ್ಣ ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಜತೆ ಅಧಿಕೃತವಾಗಿ ಮೊದಲ ಬಾರಿಗೆ ಚರ್ಚಿಸಿದ ಮೇಲೆ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು.

ದೆಹಲಿ: ಬಾಂಬ್ ಸ್ಫೋಟ, 48 ಮಂದಿಗೆ ಗಾಯ
ನವದೆಹಲಿ, ಜ. 9 (ಪಿಟಿಐ, ಯುಎನ್ಐ)– ಇಲ್ಲಿನ ಪೊಲೀಸ್ ಮುಖ್ಯ ಕಚೇರಿಯ ಮುಂದೆ ಇಂದು ಮಧ್ಯಾಹ್ನ ಊಟದ ಸಮಯದಲ್ಲಿ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಒಟ್ಟು 48 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರುರಸ್ತೆಯೊಂದರ ಮಾರುಕಟ್ಟೆ ಪ್ರದೇಶದಲ್ಲಿ ಬಾಂಬ್ ಸ್ಫೋಟಗೊಂಡಿತು. ಮಣ್ಣಿನ ಮಡಿಕೆಯೊಂದರಲ್ಲಿ ಬಾಂಬ್ ಅನ್ನು ಇಡಲಾಗಿತ್ತು ಎಂದು ದೆಹಲಿಯ ಉಪ ಪೊಲೀಸ್ ಕಮಿಷನರ್ ಬಿ.ಎಸ್. ಬೋಲಾ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.