ಮಂಗಳವಾರ, ಜೂನ್ 22, 2021
22 °C

25 ವರ್ಷಗಳ ಹಿಂದೆ: ಮಂಗಳವಾರ, 14-5-1996

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ಹುದ್ದೆಗೆ ಜ್ಯೋತಿ ಬಸು ರಾಷ್ಟ್ರೀಯ– ಎಡರಂಗದ ಅಭ್ಯರ್ಥಿ
ನವದೆಹಲಿ, ಮೇ 13–
ಕೇಂದ್ರದಲ್ಲಿ ಸರ್ಕಾರ ರಚಿಸಲು ಯತ್ನಿಸುತ್ತಿರುವ ರಾಷ್ಟ್ರೀಯ ರಂಗ– ಎಡರಂಗಗಳ ಕೂಟ ಇಂದು ರಾತ್ರಿ ತುರ್ತು ಸಭೆ ಸೇರಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು ಅವರನ್ನು ಪ್ರಧಾನಿ ಪದವಿಗೆ ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ತುರ್ತಾಗಿ ಕರೆದ ಮೂರನೇ ರಂಗದ ಪ್ರಮುಖ ನಾಯಕರ ಸಭೆಯಲ್ಲಿ ಪ್ರಧಾನಿ ಪದವಿಗೆ ಜ್ಯೋತಿ ಬಸು ಅವರ ಹೆಸರನ್ನು ಮಾಜಿ ಪ್ರಧಾನಿ ವಿಶ್ವನಾಥ ಪ್ರತಾಪ್‌ ಸಿಂಗ್‌ ಅವರು ಸೂಚಿಸಿದರು. ಸೂಚನೆಯನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಜ್ಯೋತಿ ಬಸು ಅವರೂ ಈ ಸಭೆಯಲ್ಲಿ ಹಾಜರಿದ್ದರು.

ಬಿಜೆಪಿ ಸರ್ಕಾರ ಖಚಿತ: ಅಟಲ್‌
ನವದೆಹಲಿ, ಮೇ 13 (ಪಿಟಿಐ)–
ರಾಷ್ಟ್ರೀಯ ರಂಗ ಹಾಗೂ ಕಾಂಗ್ರೆಸ್‌ ಎಷ್ಟೇ ಪ್ರಯತ್ನಿಸಿದರೂ ಬಿಜೆಪಿ ಸರ್ಕಾರ ರಚಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಹೇಳಿದ್ದಾರೆ.

ಇಂದು ಬೆಳಿಗ್ಗೆ ಪ್ರಕಾಶ್‌ಸಿಂಗ್ ಬಾದಲ್‌ ನೇತೃತ್ವದ ಅಕಾಲಿದಳದ ನಿಯೋಗ ತಮ್ಮನ್ನು ಭೇಟಿ ಮಾಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು