ಒತ್ತಡಕ್ಕೆ ಮಣಿದು ಡೀಸೆಲ್ ಬೆಲೆ ಇಳಿಕೆ
ನವದೆಹಲಿ, ಜುಲೈ 6(ಪಿಟಿಐ): ಸಂಯುಕ್ತ ರಂಗದ ಅಂಗಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಇಂದು ಡೀಸೆಲ್ ಬೆಲೆ ಏರಿಕೆಯನ್ನು ಶೇಕಡಾ 15ಕ್ಕೆ ಇಳಿಸಿ ಆದೇಶ ಹೊರಡಿಸಿದೆ.

ಡೀಸೆಲ್‌ನ ಪರಿಷ್ಕೃತ ಬೆಲೆಯನ್ನು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಶ್ರೀಕಾಂತ್ ಜೆನಾ, ‘ಪೆಟ್ರೋಲ್, ಅಡುಗೆ ಅನಿಲ ಹಾಗೂ ಇತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆ ಇಲ್ಲ’ ಎಂದು
ಸ್ಪಷ್ಟ ಪಡಿಸಿದರು.

ಡೀಸೆಲ್ ಬೆಲೆ ಏರಿಕೆಯಿಂದ ಸಾರ್ವಜನಿಕ ಸಾರಿಗೆ, ಕೃಷಿ ಕೆಲಸ ಕಾರ್ಯಗಳು ತುಟ್ಟಿಯಾಗಲಿದ್ದು, ಪರಿಣಾಮವಾಗಿ ಮಧ್ಯಮ ವರ್ಗಕ್ಕೆ ಭಾರೀ ಹೊರೆಯಾಗುತ್ತದೆ. ಆದ್ದರಿಂದ ಡೀಸೆಲ್ ಬೆಲೆ ಏರಿಕೆ ಯನ್ನು ಶೇಕಡಾ 15ಕ್ಕೆ ಸೀಮಿತಗೊಳಿಸುವ ನಿರ್ಧಾರವನ್ನು ಸಂಪುಟ ಸಭೆ ಒಮ್ಮತದಿಂದ ಕೈಗೊಂಡಿತು’ ಎಂದು ಜೆನಾ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.