ಶನಿವಾರ, ಜನವರಿ 28, 2023
15 °C

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ, 4–1–1973

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿಗೆ ರಾಜ್ಯದ ಪತ್ರ: ಬರಗಾಲ ನಿವಾರಣೆಗೆ 150 ಕೋಟಿ ಬೃಹತ್‌ ಕಾರ್ಯಕ್ರಮ

ಬೆಂಗಳೂರು, ಜ. 3– ಬರಗಾಲದಿಂದ ತೀವ್ರ ತೊಂದರೆಗೊಳಗಾದ ಜನತೆಗೆ ಎಲ್ಲ ವಿಧದ ಸಹಾಯ ಮಾಡಲು ಸರ್ಕಾರ ಈವರೆಗೆ ಕಂಡರಿಯದ ಭಾರೀ ಪ್ರಮಾಣದ ಪರಿಹಾರ ಕಾರ್ಯಕ್ರಮವನ್ನು ರೂಪಿಸಿ ಸಹಾಯಕ್ಕಾಗಿ ಪ್ರಧಾನಮಂತ್ರಿಯವರಿಗೆ ಕಳುಹಿಸಿದೆ.

ಸುಮಾರು 150 ಕೋಟಿ ಕಾರ್ಯಕ್ರಮದ ವಿವರಗಳನ್ನು ಒಳಗೊಂಡ ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸು ಅವರು ಬರೆದಿರುವ ಪತ್ರವನ್ನು ಇಂದೇ ಸಚಿವ ಸಂಪುಟದ ಸಭೆಯ ನಂತರ ದೆಹಲಿಗೆ ರವಾನಿಸಲಾಯಿತು.

ಲೆ.ಜ. ಬೇವೂರ್‌: ನೂತನ ಪ್ರಧಾನ ದಂಡನಾಯಕರು

ನವದೆಹಲಿ, ಜ. 3– ಲೆ.ಜ. ಗೋಪಾಲಗುರುನಾಥ ಬೇವೂರ್‌ ಅವರನ್ನು ಭಾರತ ಸೈನ್ಯದ ನೂತನ ಪ್ರಧಾನ
ದಂಡನಾಯಕರನ್ನಾಗಿ ನೇಮಿಸಲಾಗಿದೆ.

ಜನರಲ್‌ ಪದವಿ ಸಹಿತ ಅವರು ಜನವರಿ 15ರಂದು ಫೀಲ್ಡ್‌ ಮಾರ್ಷಲ್‌ ಸ್ಯಾಂ ಮಾಣೆಕ್‌ ಷಾ ಅವರಿಂದ ಅಧಿಕಾರ ಸ್ವೀಕರಿಸುವರೆಂದು ರಕ್ಷಣಾ ಸಚಿವ ಶಾಖೆ ಇಂದು ಪ್ರಕಟಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು