50 ವರ್ಷಗಳ ಹಿಂದೆ: ಬುಧವಾರ, 25-11-1970

ಕೇಂದ್ರದ ನೆರವಿಲ್ಲದಿದ್ದರೂ ಕೃಷ್ಣಾ ಯೋಜನೆ ಪೂರೈಕೆ: ಮುಖ್ಯಮಂತ್ರಿ ಘೋಷಣೆ
ಬಾಗಲಕೋಟೆ, ನ. 24– ಕೇಂದ್ರ ಸರ್ಕಾರ ಮತ್ತು ವಿಶ್ವ ಬ್ಯಾಂಕ್ ನೆರವು ನೀಡಲಿ ಅಥವಾ ನೀಡದಿರಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರೈಸಲು ರಾಜ್ಯ ಸರ್ಕಾರ ನಿರ್ಧರಿಸಿದೆಯೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನಿನ್ನೆ ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಘೋಷಿಸಿದರು.
ಕಾವೇರಿ ನೀರು ಮತ್ತು ಮೈಸೂರು– ಮಹಾರಾಷ್ಟ್ರ ಗಡಿ ವಿವಾದದ ಸಂಬಂಧ ದಲ್ಲಿ ರಾಜ್ಯಕ್ಕೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲವೆಂದು ಹೇಳಿದ ಮುಖ್ಯಮಂತ್ರಿಗಳು, ಮಹಾಜನ್ ವರದಿ ಕಾರ್ಯಗತವಾಗಬೇಕೆಂಬ ರಾಜ್ಯದ ನಿಲುವನ್ನು ಪುನರ್ ಪ್ರತಿಪಾದಿಸಿದರು.
ಹೊಸಪೇಟೆ ಉಕ್ಕು ಕಾರ್ಖಾನೆ: ಶೀಘ್ರದಲ್ಲೇ ನಿವೇಶನ ನಿರ್ಧಾರ
ಬೆಂಗಳೂರು, ನ. 24– ಹೊಸಪೇಟೆ ಉಕ್ಕಿನ ಕಾರ್ಖಾನೆ ನಿವೇಶನದ ಅಧ್ಯಯನಕ್ಕೆ ಬಂದಿದ್ದ ತಜ್ಞರ ತಂಡವನ್ನು ತುರ್ತು ಸಮಾ ಲೋಚನೆಗೆಂದು ಕೇಂದ್ರ ಸರ್ಕಾರ ದೆಹಲಿಗೆ ಕರೆಸಿಕೊಂಡಿರುವುದನ್ನು ಗಮನಿಸಿದರೆ, ನಿವೇಶನದ ಬಗ್ಗೆ ಕೇಂದ್ರದ ನಿರ್ಧಾರ ಸದ್ಯದಲ್ಲಿಯೇ ಪ್ರಕಟವಾಗುವಂತಿದೆ ಎಂದು ಇಲ್ಲಿನ ಕೆಲವು ವಲಯಗಳಲ್ಲಿ ಭಾವಿಸಲಾಗಿದೆ.
ಕೇಂದ್ರ ಉಕ್ಕು ಇಲಾಖೆಯ ತಜ್ಞರು ನ. 22ರಂದು ಬೆಂಗಳೂರಿಗೆ ಬಂದು ಕೆಲವು ವಿಷಯಗಳ ಬಗ್ಗೆ ಸ್ಪಷ್ಟೀಕರಣ ಪಡೆದು, ಹೈದರಾಬಾದ್ ಮಾರ್ಗವಾಗಿ ಇಂದು ದೆಹಲಿಗೆ ತೆರಳಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.