ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ, 22–12–1970

Last Updated 21 ಡಿಸೆಂಬರ್ 2020, 21:28 IST
ಅಕ್ಷರ ಗಾತ್ರ

ರಾಜ್ಯದಲ್ಲಿ ವ್ಯಾಪಕ ಗಡಿ ಚಳವಳಿ
ಬೆಂಗಳೂರು, ಡಿ. 21– ಕೇಂದ್ರ ಸರ್ಕಾರದ ಗಡಿ ನಿಲುವಿನ ವಿರುದ್ಧದ ಪ್ರತಿಭಟನೆ ಇಂದು ಕರ್ನಾಟಕದ ಮತ್ತಷ್ಟು ಭಾಗಗಳಿಗೆ ವ್ಯಾಪಿಸಿತು.

ರೈಲು ಮಾರ್ಗ ಮತ್ತು ನಿಲ್ದಾಣಗಳಿಗೆ ಜಖಂ, ರೈಲು ತಡೆ ಹಾಗೂ ಕೇಂದ್ರ ಕಚೇರಿಗಳ ಮೇಲೆ ದಾಳಿ ಪ್ರಕರಣಗಳು ಹುಬ್ಬಳ್ಳಿ, ಗದಗ, ಧಾರವಾಡ, ಬಿಜಾಪುರ, ಬೆಳಗಾವಿ ಮತ್ತು ಅಥಣಿಯಲ್ಲಿ ನಡೆಯಿತು.

ಶಾಂತಿ ರಕ್ಷಣೆಗೆ ತತ್‌ಕ್ಷಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಅವರು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಕಟವಾದ 19 ಸ್ಥಾನಗಳಲ್ಲಿ 8 ಆಡಳಿತ, 2 ಸಂಸ್ಥಾ ಕಾಂಗ್ರೆಸ್ಸಿಗೆ
ಬೆಂಗಳೂರು, ಡಿ. 21– ರಾತ್ರಿಹತ್ತು ಗಂಟೆಯವರೆಗೆ ಪ್ರಕಟವಾದ ಬೆಂಗಳೂರು ನಗರಸಭೆಯ 19 ಸ್ಥಾನಗಳ ಫಲಿತಾಂಶಗಳ ಪೈಕಿ ಆಡಳಿತ ಕಾಂಗ್ರೆಸ್ಸು 8 ಸ್ಥಾನಗಳನ್ನು ಪಡೆದಿದೆ; ಸಂಸ್ಥಾ ಕಾಂಗ್ರೆಸ್ಸಿಗೆ 2 ಸ್ಥಾನಗಳು ಮಾತ್ರ ಬಂದಿವೆ.

ಇತರ ಪಕ್ಷಗಳು ಗಳಿಸಿದ ಸ್ಥಾನಗಳ ವಿವರ ಈ ರೀತಿ ಇದೆ:ಡಿ.ಎಂ.ಕೆ–2, ಪೌರ ಸಮಿತಿ–2, ಕನ್ನಡ ಚಳವಳಿಗಾರರು–1, ಜನಸಂಘ–1, ಮುಸ್ಲಿಂ ಲೀಗ್‌–1 ಮತ್ತು ಪಕ್ಷೇತರರು–2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT