ಶನಿವಾರ, ಮೇ 8, 2021
24 °C

50 ವರ್ಷಗಳ ಹಿಂದೆ: ಬುಧವಾರ 31.3.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಂಗ್ಲಾದೇಶದ ಬಹುಪಾಲು ಪ್ರದೇಶ ಮುಜೀಬುರ್ ಸೇನೆ ವಶ

ಅಗರ್ತಲ, ಮಾರ್ಚ್ 30– ಪೂರ್ವ ಪಾಕಿಸ್ತಾನದ ಬಹುಪಾಲು ಪ್ರದೇಶ ಸ್ವತಂತ್ರ ಬಾಂಗ್ಲಾದೇಶದ ವಿಮೋಚನಾ ಸೇನೆಯ ವಶದಲ್ಲಿದೆ ಎಂದು ಬಾಂಗ್ಲಾದೇಶದ ನಾಯಕರು ಇಂದು ವಿಶ್ವಕ್ಕೆ ಸಾರಿದರು.

ಸತ್ಯಾಂಶವನ್ನು ಕಣ್ಣಾರೆ ಕಂಡು ತಿಳಿ ಯಲು ಪ್ರಪಂಚದ ರಾಷ್ಟ್ರಗಳಿಗೆ ಅವರು ಆಹ್ವಾನವಿತ್ತರು. ಸ್ವತಂತ್ರ ಬಾಂಗ್ಲಾ ಬಾನುಲಿಯ ವಿಶೇಷ ಪ್ರಸಾರದಲ್ಲಿ ಮೇಜರ್‌ ಜಿಯಾಖಾನರು ಮಾತನಾಡುತ್ತಾ, ಪಶ್ಚಿಮ ಪಾಕಿಸ್ತಾನಿ ಪಡೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲೆಲ್ಲೂ ಸೋಲುಂಡು ಹಿಂದಕ್ಕೆ ಸರಿಯುತ್ತಿವೆ ಎಂದು ತಿಳಿಸಿದರು.

ಮೈಸೂರು ಬಜೆಟ್‌ಗೆ ಅಸ್ತು–ರಾಷ್ಟ್ರಪತಿ ಆಡಳಿತ ಜಾರಿಗೆ ರಾಜ್ಯಸಭೆ ಮಿಶ್ರ ಪ್ರತಿಕ್ರಿಯೆ

ನವದೆಹಲಿ, ಮಾರ್ಚ್ 30– ಮೈಸೂರು ರಾಜ್ಯದ ತಾತ್ಕಾಲಿಕ ಬಜೆಟ್ ಅನ್ನು ಇಂದು ರಾಜ್ಯಸಭೆ ಒಪ್ಪಿತಾದರೂ ಮೈಸೂರಿನಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತಂದ ವಿಚಾರದಲ್ಲಿ ಸಮ್ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು