ಮಂಗಳವಾರ, ಜೂನ್ 22, 2021
27 °C

50 ವರ್ಷಗಳ ಹಿಂದೆ: ಗುರುವಾರ 03.06.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯಹಿತ ಅಲಕ್ಷಿಸಿ ‘ಏಕಪಕ್ಷೀಯ ಹಾಗೂ ಸರ್ವಾಧಿಕಾರಿ’ ವರ್ತನೆ

ನವದೆಹಲಿ, ಜೂನ್ 2– ಮೈಸೂರಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ಮೇಲೆ ರಾಜ್ಯಪಾಲ ಶ್ರೀ ಧರ್ಮವೀರ ಅವರು ರಾಜ್ಯದ ಜನತೆಯ ಹಿತಗಳ ವಿರುದ್ಧ ‘ಏಕಪಕ್ಷೀಯವಾಗಿ ಹಾಗೂ ಸರ್ವಾಧಿಕಾರಿ ಯಂತೆ’ ಕಾರ್ಯ ನಿರ್ವಹಿಸುತ್ತಿದ್ದಾರೆಂದು ದೂರುವ ಮನವಿ ಪತ್ರವೊಂದನ್ನು ಮೈಸೂರಿನ ಸಂಸತ್ ಸದಸ್ಯರು ಇಂದು ಪ್ರಧಾನ ಮಂತ್ರಿಗೆ ಸಲ್ಲಿಸಿದರು.

ವಿವಿಧ ಸಮಿತಿ ಮತ್ತು ಸಂಸ್ಥೆಗಳಿಗೆ ನೇಮಕ ಮಾಡುವಾಗಲೂ ರಾಜ್ಯಪಾಲರು ಪಕ್ಷೀಯ ಆಧಾರದ ಮೇಲೆ ವರ್ತಿಸುತ್ತಿದ್ದಾರೆಂದೂ ಮನವಿಯಲ್ಲಿ ಆಪಾದಿಸಲಾಗಿದೆ.

ಬಿಹಾರ: ತ್ರಿಸದಸ್ಯ ಸಂಪುಟ ಪ್ರಮಾಣ ಸ್ವೀಕಾರ ‘ಸ್ವಚ್ಛ’ ಆಳ್ವಿಕೆ ಭರವಸೆ

ಪಟ್ನಾ, ಜೂನ್ 2– ಶ್ರೀ ಭೋಲಾ ಪಾಸ್ವಾನ್ ಶಾಸ್ತ್ರಿ ಅವರ ನಾಯಕತ್ವದಲ್ಲಿ ಪ್ರಗತಿಶೀಲ ವಿಧಾಯಕ ದಳದ ಮೂರು ಜನ ಸದಸ್ಯರ ಸಂಪುಟವೊಂದು ಇಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿ ರಾಜಭವನದಲ್ಲಿ ರಾಜ್ಯಪಾಲ ಶ್ರೀ ದೇವಕಾಂತ ಬರೂವಾ ಅವರ ಸಮ್ಮುಖ ದಲ್ಲಿ ಸರಳ ಸಮಾರಂಭವೊಂದರಲ್ಲಿ ಪ್ರಮಾಣವಚನ ಸ್ವೀಕರಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು