ಮಂಗಳವಾರ, ಜೂನ್ 28, 2022
25 °C

50 ವರ್ಷಗಳ ಹಿಂದೆ: ಶನಿವಾರ 5.6.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂದಿನ ವಾರದಲ್ಲಿ ಪಿಎಸ್‌ಪಿ–ಎಸ್‌ಎಸ್‌ಪಿ ವಿಲೀನದ ಘೋಷಣೆ

ಬೆಂಗಳೂರು, ಜೂನ್ 4–  ಪ್ರಜಾ ಸೋಷಲಿಸ್ಟ್ ಪಕ್ಷ– ಸಂಯುಕ್ತ ಸೋಷಲಿಸ್ಟ್ ಪಕ್ಷಗಳ ವಿಲೀನ ಮುಂದಿನ ವಾರ ನಡೆಯಲಿದೆ. ವಿಲೀನದಿಂದ ಉದ್ಭವಿಸುವ ಪಕ್ಷದ ಹೆಸರು ‘ಸೋಷಲಿಸ್ಟ್ ಪಕ್ಷ’.

ಈ ವಿಷಯವನ್ನು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದ ಸಂಯುಕ್ತ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಅವರು ವಿಲೀನಕ್ಕೆ ಆಧಾರವಾದ ಕರಡು ಒಪ್ಪಂದ ಅಂತಿಮವಾಗಿ ಸಿದ್ಧವಾಗಿದೆಯೆಂದೂ, ಮುಂದಿನ ವಾರ ದೆಹಲಿಯಲ್ಲಿ ಎರಡೂ ಪಕ್ಷಗಳ ಪ್ರತಿನಿಧಿಗಳು ಒಪ್ಪಂದಕ್ಕೆ ಸಹಿ ಹಾಕುವರೆಂದೂ ತಿಳಿಸಿದರು.

ರೈಲುಗಳ ವಿಳಂಬಕ್ಕೆ ಕಾರಣರಾದವರಿಗೆ ಶಿಕ್ಷೆ: ಕೆಂಗಲ್ ಎಚ್ಚರಿಕೆ

ನವದೆಹಲಿ, ಜೂನ್ 4– ರೈಲುಗಳ ವಿಳಂಬ ಸಂಚಾರಕ್ಕೆ ಕಾರಣರಾದವರನ್ನು ಶಿಕ್ಷಿಸಲಾಗುವುದೆಂದು ಕೇಂದ್ರ ರೈಲ್ವೆ
ಸಚಿವ  ಕೆ. ಹನುಮಂತಯ್ಯನವರು ಇಂದು ಇಲ್ಲಿ ರೈಲ್ವೆ ನೌಕರರಿಗೆ ಎಚ್ಚರಿಕೆ ನೀಡಿದರು.

ವಲಯ ರೈಲ್ವೆಗಳು ಮತ್ತು ಉತ್ಪಾದನಾ ಘಟಕಗಳ ಜನರಲ್ ಮ್ಯಾನೇಜರುಗಳ ಮೂರು ದಿನಗಳ ಸಮ್ಮೇಳನ ಉದ್ಘಾಟಿಸಿದ ಅವರು ವೇಳಾಪಟ್ಟಿಗನುಗುಣವಾಗಿ ರೈಲುಗಳ ಸಂಚಾರಕ್ಕೆ ಸಕಲ ಯತ್ನಗಳನ್ನೂ ನಡೆಸುವಂತೆ ಕರೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು