ಆಗಸ್ಟ್ 30ರಿಂದ ತಮಿಳುನಾಡಿನಲ್ಲಿ ಪಾನನಿರೋಧ ರದ್ದು
ಚೆನ್ನೈ, ಜೂನ್ 19–ತಮಿಳುನಾಡಿನಾದ್ಯಂತ ಆಗಸ್ಟ್ 30ರಿಂದ ಪಾನ ನಿರೋಧ ರದ್ದಾಗುವುದು. ಇನ್ನು ರಾಷ್ಟ್ರದಲ್ಲಿ ಪಾನ ನಿರೋಧ ಜಾರಿಯಲ್ಲಿರುವ ಏಕೈಕ ರಾಜ್ಯವೆಂದರೆ ಗುಜರಾತ್.
ತಮಿಳುನಾಡು ವಿಧಾನಸಭೆಯಲ್ಲಿ ಇಂದು ಈ ವಿಷಯವನ್ನು ತಿಳಿಸಿದ ಮುಖ್ಯಮಂತ್ರಿ ಶ್ರೀ ಕರುಣಾನಿಧಿ ಅವರು, ‘ಪಾನ ನಿರೋಧವನ್ನು ದೇಶದಾದ್ಯಂತ ರಾಷ್ಟ್ರೀಯ ನೀತಿಯಾಗಿ ಕೇಂದ್ರ ಸರ್ಕಾರ ಜಾರಿಗೆ ತರುವವರೆಗೆ ಅದು ರಾಜ್ಯದಲ್ಲಿ ರದ್ದಾಗಿರುವುದು. ಪಾನ ನಿರೋಧ ಜಾರಿಯಿಂದ ಆದಾಯದಲ್ಲಿ ಬಹಳ ನಷ್ಟ ಉಂಟಾಗಿದೆ’ ಎಂದೂ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.