ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷದ ಹಿಂದೆ | ಕೃಷ್ಣಾ ನ್ಯಾಯಮಂಡಲಿ ಕಾರ್ಯಕಲಾಪ: ಕರ್ನಾಟಕದ ನಿರ್ಗಮನ

Published 20 ಆಗಸ್ಟ್ 2024, 1:23 IST
Last Updated 20 ಆಗಸ್ಟ್ 2024, 1:23 IST
ಅಕ್ಷರ ಗಾತ್ರ
ಕೃಷ್ಣಾ ನ್ಯಾಯಮಂಡಲಿ ಕಾರ್ಯಕಲಾಪ: ಕರ್ನಾಟಕದ ನಿರ್ಗಮನ

ನವದೆಹಲಿ, ಆ. 19– ಕೃಷ್ಣಾ ಜಲವಿವಾದ ಕುರಿತ ನ್ಯಾಯಮಂಡಲಿಯಿಂದ ತನಗೆ ‘ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ನಿರ್ಧಾರ’ ಸಿಕ್ಕುವ ಸಂಭವವಿಲ್ಲವೆಂದು ಕರ್ನಾಟಕ ಸರ್ಕಾರ ಆರೋಪಿಸಿ ಇಂದು ನ್ಯಾಯಮಂಡಲಿಯ ಕಾರ್ಯಕಲಾಪಗಳಿಂದ ಹೊರಬಂದಿತು.

ನ್ಯಾಯಮಂಡಲಿಯ ಮುಂದಿನ ಕಾರ್ಯಕಲಾಪಗಳಲ್ಲಿ ಭಾಗವಹಿಸದಿರಲೂ ಕರ್ನಾಟಕ ಸರ್ಕಾರ ಉದ್ದೇಶ ವ್ಯಕ್ತಪಡಿಸಿತು.

ರಾಜ್ಯದ ಅಡ್ವೊಕೇಟ್‌ ಜನರಲ್ ಆರ್.ಎನ್. ಬೈರಾರೆಡ್ಡಿ ಅವರು ನ್ಯಾಯಮಂಡಲಿ ಕಾರ್ಯಕಲಾಪಗಳಿಂದ ಹೊರಬರುವ ಬಗೆಗೆ ಒಂದು ಹೇಳಿಕೆ ನೀಡಿ, ಎಲ್ಲ ಅಪರಿಹಾರ್ಯ ಸಮಸ್ಯೆಗಳನ್ನು ಕರ್ನಾಟಕಕ್ಕೆ ಬಾಧಕವಾಗುವಂತೆ ‘ಪರಿಹರಿಸಲು ಅಥವಾ ಬಿಡಿಸಲು’ ಪ್ರಯತ್ನಿಸಲಾಗುತ್ತಿದೆಯೆಂದು ಆಪಾದಿಸಿ ‘ಇದರಿಂದ ಕರ್ನಾಟಕಕ್ಕೆ ಭಾರಿ ಅನ್ಯಾಯವಾಗಿ ಅದರ ಹಿತಗಳಿಗೆ ಧಕ್ಕೆ ತಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT