ಕಾವೇರಿ ಯೋಜನೆ ಜನಕ ನಿಜಲಿಂಗಪ್ಪಗೆ ಹಾರ್ದಿಕ ಸನ್ಮಾನ
ಬೆಂಗಳೂರು, ಫೆ. 5– ‘ಸದ್ಯದ ಸರ್ಕಾರ ಹೋಗಿ, ಜನತೆಗೆ ಉಪಕಾರ ಮಾಡುವ ಸರ್ಕಾರ ಆದಷ್ಟು ಬೇಗನೆ ಬಂದಲ್ಲಿ, ಅದೇ ನನಗೊಂದು ತೃಪ್ತಿ ಹಾಗೂ ಅದೇ ನನಗೆ ಸನ್ಮಾನ ಮಾಡಿದಂತೆ’
–ಕಾವೇರಿ ಯೋಜನೆಯನ್ನು ತಮ್ಮ ಅಧಿಕಾರಾವಧಿಯಲ್ಲಿ ಮಂಜೂರು ಮಾಡಿದ್ದಕ್ಕಾಗಿ ಬೆಂಗಳೂರು ಕಾರ್ಪೊರೇಷನ್ ಜಿಲ್ಲಾ (ಸಂಸ್ಥಾ) ಸಮಿತಿಯ ಆಶ್ರಯದಲ್ಲಿ ತಮಗೆ ಏರ್ಪಡಿಸ
ಲಾಗಿದ್ದ ಸನ್ಮಾನಕ್ಕೆ ನೀಡಿದ ಉತ್ತರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಈ ಮಾತನ್ನು ಹೇಳಿದರು.
ಈಚೆಗೆ ನಗರದಲ್ಲಿ ‘ಕಾವೇರಿ’ಗೆ ಸ್ವಾಗತ ನೀಡಿ ನಡೆದ ಸಮಾರಂಭದಲ್ಲಿ, ಬೆಂಗಳೂರು ನಗರಕ್ಕೆ ಕಾವೇರಿ ನೀರನ್ನು ಒದಗಿಸುವ ಯೋಜನೆಗೆ ಮಂಜೂರಾತಿ ನೀಡಿದ ಹಿಂದಿನ ಸರ್ಕಾರ ಹಾಗೂ ನಾಯಕರನ್ನು ಸ್ಮರಿಸಲಿಲ್ಲ ಎಂಬುದರ ಬಗ್ಗೆ ಪ್ರಸ್ತಾಪಿಸಿದ ಅವರು, ‘ಉಪಕಾರ ಮಾಡಿದೆ ಅಂತ ಅದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳುವುದು ತಪ್ಪು’ ಎಂದರು.