ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುಜರಾತಿನಲ್ಲಿ ಧಾನ್ಯ ಉಗ್ರಾಣಗಳ ಲೂಟಿ: ಎರಡು ಕಡೆ ಗುಂಡು

Published 17 ಜನವರಿ 2024, 23:09 IST
Last Updated 17 ಜನವರಿ 2024, 23:09 IST
ಅಕ್ಷರ ಗಾತ್ರ

18–1–1974

ಗುಜರಾತಿನಲ್ಲಿ ಧಾನ್ಯ ಉಗ್ರಾಣಗಳ ಲೂಟಿ: ಎರಡು ಕಡೆ ಗುಂಡು 

ಅಹ್ಮದಾಬಾದ್‌, ಜ. 17–ಗುಜರಾತಿನ ಮೂರು ಪಟ್ಟಣಗಳಲ್ಲಿ ಸರ್ಕಾರಿ ಧಾನ್ಯ ಉಗ್ರಾಣಗಳನ್ನು ಲೂಟಿಮಾಡಿದ ದೊಂಬಿಯನ್ನು ಚದುರಿಸಲು ನಿನ್ನೆ ರಾತ್ರಿ ಮತ್ತು ಈ ದಿನ ಎರಡು ಕಡೆ ಪೋಲೀಸರು ಒಟ್ಟು ಐದು ಸುತ್ತು ಗುಂಡು ಹಾರಿಸಿದರು.

ಪೊಲೀಸ್ ಗೋಲಿಬಾರಿನಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. 

ಬಚ್ಚಿಟ್ಟ ಆಹಾರಧಾನ್ಯ ಹೊರತೆಗೆಯಲು ವ್ಯಾಪಕ ಕ್ರಮ  

ಬೆಂಗಳೂರು, ಜ.17 – ಇನ್ನು ಆರು ವಾರಗಳಲ್ಲಿ ಉದ್ದೇಶಿತ 2.5 ಲಕ್ಷ ಟನ್ನುಗಳ ಆಹಾರ ಸಂಗ್ರಹ ಗುರಿಯನ್ನು ಸಾಧಿಸಲು ಹಟತೊಟ್ಟಿರುವ ಸರ್ಕಾರವು, ಕಾಳಸಂತೆ ಮತ್ತು ಅಕ್ರಮ ಸಂಗ್ರಹದಲ್ಲಿರುವ ಆಹಾರಧಾನ್ಯಗಳನ್ನು ಹೊರತೆಗೆಯಲು ವ್ಯಾಪಕ ಕ್ರಮಗಳನ್ನು ಕೈಗೂಳ್ಳುತ್ತಿದೆ. 

ಆಹಾರ ಸಚಿವ ಕೆ.ಎಚ್‌. ಪಾಟೀಲರ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ಈ ಕಾರ್ಯ ಈಗಾಗಲೇ ಆರಂಭವಾಗಿದ್ದು ಸುಮಾರು ಒಂದು ಕೋಟಿ ರೂ.ಗಳ ಬೆಳೆಬಾಳುವ ಆಹಾರ ಧಾನ್ಯಗಳು ಅಕ್ರಮ ದಾಸ್ತಾನಿನಿಂದ ಹೊರಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT