ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಬುಧವಾರ 19–4–1972

Last Updated 18 ಏಪ್ರಿಲ್ 2022, 20:30 IST
ಅಕ್ಷರ ಗಾತ್ರ

ಮಹಾಜನ್ ವರದಿ ಬಗ್ಗೆ ಸಂಸತ್ತಿನದೇ ಅಂತಿಮ ತೀರ್ಮಾನ: ಅರಸು

ಬೆಂಗಳೂರು, ಏ. 18– ಮೈಸೂರು–ಮಹಾರಾಷ್ಟ್ರ ಗಡಿ ವಿವಾದ ಪರಿಹಾರಕ್ಕೆ ಮಹಾಜನ್ ವರದಿಯನ್ನು ಮುಂದಿಟ್ಟು
ಕೊಂಡಿರುವ ಸಂಸತ್ತಿನದೇ ಅಂತಿಮ ನುಡಿ ಎಂದು ಮುಖ್ಯಮಂತ್ರಿ ದೇವರಾಜ ಅರಸು ಇಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.

‘ಈ ಪ್ರಶ್ನೆಯ ಪರಿಹಾರದ ಹೊಣೆಯನ್ನು ಪ್ರಧಾನಿಯವರಿಗೆ ಬಿಟ್ಟಿಲ್ಲ’ ಎಂದು ಸದಸ್ಯರ ಸಂದೇಹಗಳನ್ನು ನಿವಾರಿಸಿದ ಮುಖ್ಯಮಂತ್ರಿ ಅವರು ‘ಅಂತಿಮ ತೀರ್ಪಿನ ಅಧಿಕಾರ ಪಾರ್ಲಿಮೆಂಟ್‌ಗೆ ಬಿಟ್ಟಿದ್ದು, ಕಾದು ನೋಡೋಣ’ ಎಂದರು.

ರಾಸಾಯನಿಕ ಗೊಬ್ಬರ ಬಳಕೆ ಬಗ್ಗೆ ಶೀಘ್ರವೇ ಕಾಯಿದೆ ಜಾರಿ

ಬೆಂಗಳೂರು, ಏ. 18– ರಾಸಾಯನಿಕ ಗೊಬ್ಬರ ಬಳಕೆ ಮತ್ತು ವಹಿವಾಟು ಸಂಬಂಧದಲ್ಲಿ ಕಾಯಿದೆಯೊಂದು ಕಾರ್ಯ
ಗತವಾಗುವ ಸಂಭವವಿದೆ.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸಬೇಕೆಂಬ ನಿರ್ಣಯದ ಮೇಲೆ ವಿಧಾನಪರಿಷತ್ತಿನಲ್ಲಿ ಚರ್ಚೆ ನಡೆಯುತ್ತಿದ್ದಾಗ
ಪಶುಪಾಲನೆ ರಾಜ್ಯ ಸಚಿವ ಎನ್. ಚಿಕ್ಕೇಗೌಡ ಅವರು ಇಂದು ಮಧ್ಯಪ್ರವೇಶಿಸಿ, ‘ರಾಸಾಯನಿಕ ಗೊಬ್ಬರ ಕಾಯಿದೆಯೊಂದನ್ನು ತೀವ್ರವಾಗಿ ಕಾರ್ಯಗತಗೊಳಿಸಲು ಉದ್ದೇಶಿಸಿರುವುದಾಗಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT