ನಗರದ ಬಹಿರಂಗ ಪೇಟೆಗೆ 2000 ಟನ್ ಅಕ್ಕಿ ಬಿಡುಗಡೆ
ಬೆಂಗಳೂರು, ಆ. 23– ನಗರದ ಅಕ್ಕಿ ಸಗಟು ವ್ಯಾಪಾರಿಗಳಲ್ಲಿ ಸಂಗ್ರಹ ಕಡಿಮೆಯಾಗಿರುವುದರ ಪರಿಣಾಮವಾಗಿ ಉಂಟಾಗಿರುವ ಕೊರತೆ ನಿವಾರಿಸಲು, ಆಹಾರ ಇಲಾಖೆಯು ನಾಳೆ 2000 ಟನ್‌ಗಳಷ್ಟು ಅಕ್ಕಿಯನ್ನು ಬಹಿರಂಗ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಈ ಅಕ್ಕಿಯ ವಿಶೇಷ ಮಾರಾಟವು, ಕೆಂಪೇಗೌಡ ರಸ್ತೆ ಮತ್ತು ನರಸಿಂಹ ರಾಜಾ ರಸ್ತೆಯಲ್ಲಿರುವ ಜನತಾ ಬಜಾರ್ ಶಾಖೆಗಳಲ್ಲಿ ನಡೆಯುವುದು.
ಪ್ರತಿ ರೇಷನ್ ಕಾರ್ಡಿಗೆ ತಲಾ ಐದು ಕೆ.ಜಿ.ಯಂತೆ ಅಕ್ಕಿ ದೊರೆಯುವುದು. ಬೆಲೆ ಈ ರೀತಿ ಇದೆ: ಉತ್ತಮ ಅಕ್ಕಿ ಕೆ.ಜಿ.ಗೆ 1= 45 ರೂ. ಮಧ್ಯಮ ಉತ್ತಮ 1= 35, ಮಧ್ಯಮ 1= 25 ರೂ. ದಪ್ಪಕ್ಕಿ 1= 15.
ಉದ್ಯೋಗ ಯೋಜನೆಗೆ ಮಿತವ್ಯಯದ ಕತ್ತರಿ ಇಲ್ಲ– ಧಾರಿಯಾ
ನವದೆಹಲಿ, ಆ. 23– ಮಿತವ್ಯಯದ ಕ್ರಮಗಳನ್ನು ಜಾರಿಗೆ ತಂದರೂ ಸರಕಾರ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲವೆಂದು ಯೋಜನಾ ಶಾಖೆ ರಾಜ್ಯ ಸಚಿವ ಮೋಹನ ಧಾರಿಯಾ ಅವರು ಇಂದು ರಾಜ್ಯಸಭೆಗೆ ತಿಳಿಸಿದರು.
ಕೃಷ್ಣಕಾಂತ್ ಅವರ ಪ್ರಶ್ನೆಗೆ ಧಾರಿಯಾ ಅವರು ಉತ್ತರ ಕೊಟ್ಟು, ಒಂದು ಲಕ್ಷ ಜನರಿಗೆ ಉದ್ಯೋಗ ಒದಗಿಸುವ 100 ಕೋಟಿ ರೂ.ಗಳ ಕಾರ್ಯಕ್ರಮವನ್ನು ಸರಕಾರ ಕಾರ್ಯಗತಗೊಳಿಸುವುದೆಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.