ಗುರುವಾರ , ಮೇ 13, 2021
40 °C
50 ವರ್ಷಗಳ ಹಿಂದೆ ಸೋಮವಾರ 19.4.1971

50 ವರ್ಷಗಳ ಹಿಂದೆ| ಸೋಮವಾರ 19.4.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಂಗ್ಲಾದೇಶದ ಪ್ರಥಮ ರಾಯಭಾರ ಕಚೇರಿ ಕಲ್ಕತ್ತೆಯಲ್ಲಿ ಅಸ್ತಿತ್ವಕ್ಕೆ

ಕಲ್ಕತ್ತ, ಏ. 18– ಇಲ್ಲಿರುವ ಪಾಕಿಸ್ತಾನಿ ಸಹಾಯಕ ಹೈಕಮಿಷನ್ ಕಚೇರಿಯು ಇಂದು ಮಧ್ಯಾಹ್ನ ಬಾಂಗ್ಲಾದೇಶದ ಧ್ವಜವನ್ನು ಹಾರಿಸಿ, ವಿದೇಶದಲ್ಲಿ ನವೋದಿತ ಗಣರಾಜ್ಯದ ಪ್ರಥಮ ರಾಯಭಾರ ಕಚೇರಿಯಾಗಿ ಪರಿವರ್ತಿತಗೊಂಡಿತು.

ಮಧ್ಯ ಕಲ್ಕತ್ತದಲ್ಲಿರುವ ಈ ಕಚೇರಿಯ ಮೇಲೆ ಧ್ವಜವನ್ನು ಹಾರಿಸಿದ ಸಹಾಯಕ ಹೈಕಮಿಷನರ್ ಹುಸೇನ್ ಅಲಿಯವರು, ಬಾಂಗ್ಲಾದೇಶದ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸಬೇಕೆಂಬ ತಮ್ಮ ನಿರ್ಧಾರಕ್ಕೆ ಮೂವರು ಸಹೋದ್ಯೋಗಿ ಅಧಿಕಾರಿಗಳ ಹೃತ್ಪೂರ್ವಕ ಬೆಂಬಲವಿದೆ ಎಂದಿದ್ದಾರೆ.

ಭಾರತದಲ್ಲಿ ಕಾರಿನ ಬೆಲೆ ವಿದೇಶಕ್ಕಿಂತ ಶೇ 120ರಷ್ಟು ದುಬಾರಿ

ನವದೆಹಲಿ, ಏ. 18– ಭಾರತದಲ್ಲಿ ಶೇಕಡ 85ರಷ್ಟು ದೇಶೀಯ ವಸ್ತುಗಳಿಂದ ತಯಾರಿಸಿದ ಕಾರುಗಳ ಕಾರ್ಖಾನೆ ಬೆಲೆ ಯುರೋಪಿನಲ್ಲಿ ತಯಾರಾದ ಕಾರುಗಳ ಬೆಲೆಗಿಂತ ಶೇಕಡ 120ರಷ್ಟು ಹೆಚ್ಚಾಗಿದೆ.

1966ರ ಅಂಕಿ ಅಂಶಗಳನ್ನು ಆಧರಿಸಿದ ವಿಶ್ವಬ್ಯಾಂಕಿನ ವಿಶ್ಲೇಷಣೆಯಿಂದ ಇದು ಬೆಳಕಿಗೆ ಬಂದಿದೆ.

ಅಂತರರಾಷ್ಟ್ರೀಯ ಕಾರ್ಖಾನೆಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಕಾರುಗಳ ಉತ್ಪಾದನೆ ಕಮ್ಮಿ ಇರುವುದು ಹಾಗೂ ಉಪಕರಣ ಮತ್ತು ಬಿಡಿ ಭಾಗಗಳ ಖರೀದಿಗೆ ಸಂಬಂಧಿಸಿದ ವೆಚ್ಚ ವಿಪರೀತವಾಗಿರುವುದೇ ಇದಕ್ಕೆ ಕಾರಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು