ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಗಡಿ ಭದ್ರತಾ ಪಡೆಯವರಿಂದ ಶೀಲಭಂಗ

50 ವರ್ಷಗಳ ಹಿಂದೆ: ಗಡಿ ಭದ್ರತಾ ಪಡೆಯವರಿಂದ ಶೀಲಭಂಗ
Published 18 ಏಪ್ರಿಲ್ 2024, 19:39 IST
Last Updated 18 ಏಪ್ರಿಲ್ 2024, 19:39 IST
ಅಕ್ಷರ ಗಾತ್ರ

ಗಡಿ ಭದ್ರತಾ ಪಡೆಯವರಿಂದ ನಾಗಾ, ಮಣಿಪುರಿ ಮಹಿಳೆಯರ ಶೀಲಭಂಗ ಆರೋಪ: ತನಿಖೆಯ ಭರವಸೆ

ನವದೆಹಲಿ, ಏ. 18– ಗಡಿ ಭದ್ರತಾ ಪಡೆಯ ಅಧಿಕಾರಿಗಳು ಮತ್ತು ಸಿಪಾಯಿಗಳು ಕಳೆದ ತಿಂಗಳು ಮತ್ತು ಈ ತಿಂಗಳ ಆದಿಯಲ್ಲಿ ನಾಗಾ ಹಾಗೂ ಮಣಿಪುರಿ ಮಹಿಳೆಯರ ಶೀಲಭಂಗ ಮಾಡಿದರೆಂಬ ಆಪಾದನೆಗಳ ಬಗ್ಗೆ ಕೂಲಂಕಷ ತನಿಖೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಉಮಾಶಂಕರ ದೀಕ್ಷಿತ್ ಅವರು ಇಂದು ಲೋಕಸಭೆಯಲ್ಲಿ ಭರವಸೆ ನೀಡಿದರು.

ಇಂಥ ಅಕೃತ್ಯವನ್ನೆಸಗಿದವರ ವಿರುದ್ಧ ಆಪಾದನೆಗಳು ರುಜುವಾತಾದಲ್ಲಿ ಉಗ್ರ ಕ್ರಮ ಕೈಗೊಳ್ಳುವುದಾಗಿಯೂ ಸಚಿವರು ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸದಸ್ಯರಿಗೆ ಆಶ್ವಾಸನೆ ನೀಡಿದರು.

ಔಷಧಗಳಲ್ಲಿ ಕಲಬೆರಕೆ: ಉಗ್ರ ಕ್ರಮಕ್ಕೆ ರಾಜ್ಯಗಳಿಗೆ ಆದೇಶ

ನವದೆಹಲಿ, ಏ. 18– ಔಷಧ ಕಲಬೆರಕೆ ಅಪರಾಧ ಎಸಗುವವರಿಗೆ ಸಾಧ್ಯವಾದಷ್ಟೂ ಉಗ್ರವಾದ ಶಿಕ್ಷೆ ವಿಧಿಸಬೇಕೆಂದು ಕೇಂದ್ರ ಆರೋಗ್ಯ ಸಚಿವ ಕರಣ್‌ ಸಿಂಗ್‌ ಅವರು ರಾಜ್ಯಗಳ ಆರೋಗ್ಯ ಸಚಿವರಿಗೆ ಬರೆದಿರುವ ಒಂದು ಪತ್ರದಲ್ಲಿ ಕರೆ ಕೊಟ್ಟಿದ್ದಾರೆ.

ಔಷಧಿ ಮತ್ತು ಶೃಂಗಾರ ವಸ್ತುಗಳಿಗೆ ಸಂಬಂಧಿಸಿದ ಕಾನೂನನ್ನು ಸೂಕ್ತವಾಗಿ ತಿದ್ದುಪಡಿ ಮಾಡಲೂ ಕ್ರಮ ತೆಗೆದುಕೊಳ್ಳಲಾ ಗುತ್ತಿದೆ ಎಂದು ಇಂದು ಇಲ್ಲಿ ಪ್ರಕಟಿಸಿದ ಕರಣ್‌ ಸಿಂಗ್‌ರ ಪತ್ರದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT