ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ ಈ ದಿನ: ಕೃತಕ ಮಳೆ ತರಿಸಲು ಸಿದ್ಧತೆ

50 ವರ್ಷಗಳ ಹಿಂದೆ ಈ ದಿನ: ಕೃತಕ ಮಳೆ ತರಿಸಲು ಸಿದ್ಧತೆ
Published 28 ಜೂನ್ 2024, 19:44 IST
Last Updated 28 ಜೂನ್ 2024, 19:44 IST
ಅಕ್ಷರ ಗಾತ್ರ

ಕೃತಕ ಮಳೆ ತರಿಸಲು ಸಿದ್ಧತೆ

ಬೆಂಗಳೂರು, ಜೂನ್‌ 28– ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ವಿಫಲವಾಗಿ, ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗುವಂತಾದರೆ, ಲಿಂಗನಮಕ್ಕಿ ಮತ್ತಿತರ ಅಗತ್ಯ ಪ್ರದೇಶಗಳಲ್ಲಿ ‘ಕೃತಕ ಮಳೆ’ ತರಿಸುವ ಕಾರ್ಯಕ್ರಮವನ್ನು ರಾಜ್ಯ ವಿದ್ಯುತ್‌ ಮಂಡಳಿಯು ರೂಪಿಸುತ್ತಿದೆ.

ದೆಹಲಿಯಿಂದ ಬೆಂಗಳೂರಿಗೆ ಮರಳಿದ ಮಂಡಳಿಯ ಅಧ್ಯಕ್ಷ ಶ್ರೀ ಶಿವಪ್ರಕಾಶಂ ಅವರು, ಈ ಸಂಬಂಧದಲ್ಲಿ ಈಗಾಗಲೇ ಕೇಂದ್ರ ಹವಾಮಾನ ಇಲಾಖೆಯ ಡೈರೆಕ್ಟರ್ ಜನರಲ್‌ ಅವರೊಡನೆ ಮಾತುಕತೆ ನಡೆಸಿದ್ದಾರೆ.

ಶ್ರೀಲಂಕೆಗೆ ಕಛತೀವು ‘ಭೂದಾನ’ದ ವಿರುದ್ಧ ಜನಸಂಘದ ರಿಟ್‌

ಮುಂಬೈ, ಜೂನ್‌ 28– ಕಛತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡುವ ಕೇಂದ್ರದ ವಿರುದ್ಧ ಜನಸಂಘವು ವಿವಾದ ಎಬ್ಬಿಸಿದೆ.

ಆಯಕಟ್ಟಿನಲ್ಲಿರುವ ಈ ದ್ವೀಪದ ಪರಮಾಧಿಕಾರ ಬಿಟ್ಟುಕೊಡುವುದರ ವಿರುದ್ಧ ಮದ್ರಾಸ್‌ ಶ್ರೇಷ್ಠ ನ್ಯಾಯಾಲಯದಲ್ಲಿ ರಿಟ್‌ ಹಾಕುವಂತೆ ಆ ರಾಜ್ಯದ ಘಟಕಕ್ಕೆ ಆದೇಶ ನೀಡಿರುವುದನ್ನು ಪಕ್ಷದ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT