ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ: ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ನೇತೃತ್ವದಲ್ಲಿ ಬೃಹತ್ ಜಾಥಾ

Published 6 ಜೂನ್ 2024, 0:13 IST
Last Updated 6 ಜೂನ್ 2024, 0:13 IST
ಅಕ್ಷರ ಗಾತ್ರ

ವಿಧಾನಸಭೆ ವಿಸರ್ಜನೆ ಆಗಿದ್ದರೂ ರಾಷ್ಟ್ರಪತಿ ಚುನಾವಣೆಗೆ ಅಡ್ಡಿ ಇಲ್ಲ

ದೆಹಲಿ, ಜೂನ್‌ 5: ಒಂದು ರಾಜ್ಯದ ವಿಧಾನಸಭೆ ವಿಸರ್ಜನೆ ಆಗಿದ್ದರೂ ರಾಷ್ಟ್ರಪತಿ ಚುನಾವಣೆಯನ್ನು ಅವರ ಅಧಿಕಾರಾವಧಿ ಮುಗಿಯುವ ಮುನ್ನವೇ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಷ್ಟ್ರಪತಿಯವರ ಅಧಿಕಾರಾವಧಿ ಮುಗಿದ ಕಾರಣ ತೆರವಾದ ಅವರ ಸ್ಥಾನಕ್ಕೆ ಚುನಾವಣೆ ನಡೆಯುವ ಸಮಯಕ್ಕೆ ಅಸ್ತಿತ್ವದಲ್ಲಿರುವ ಸಂಸತ್ತಿನ ಉಭಯ ಸದನಗಳ ಹಾಗೂ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ಮಾತ್ರ ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಪಡೆದಿರುತ್ತಾರೆ ಎಂದೂ ಕೋರ್ಟ್‌ ಸ್ಪಷ್ಟಪಡಿಸಿದೆ. 

ಜೆ.ಪಿ. ನೇತೃತ್ವದಲ್ಲಿ ಬೃಹತ್‌ ಜಾಥಾ

ಪಟನಾ, ಜೂನ್‌ 5: ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್‌ ಅವರ ನಾಯಕತ್ವದಲ್ಲಿ ಅಸಂಖ್ಯಾತ ಮಂದಿ ಇಂದು ರಾಜಧಾನಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಿಹಾರ ವಿಧಾನಸಭೆ ವಿಸರ್ಜನೆಗಾಗಿ ಒತ್ತಾಯಪಡಿಸಿದರು.

ಬಿಹಾರ ವಿದ್ಯಾರ್ಥಿ ಕ್ರಿಯಾ ಸಮಿತಿ ಏರ್ಪಡಿಸಿದ್ದ ಈ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಮಂದಿ ವಿದ್ಯಾರ್ಥಿಗಳು, ಯುವಕರು ಭಾಗವಹಿಸಿದರು.

ಟ್ರಕ್ಕುಗಳಲ್ಲಿ ಮೆರವಣಿಗೆ ನಡೆಸಿದ ಜನ, ವಿಧಾನಸಭೆ ವಿಸರ್ಜನೆಗೆ ಒತ್ತಾಯಪಡಿಸಲು ವಿವಿಧ ಕ್ಷೇತ್ರಗಳ ಮತದಾರರಿಂದ ಸಂಗ್ರಹಿಸಿದ್ದ ಹಸ್ತಾಕ್ಷರ ಪತ್ರಗಳ ಕಂತೆಗಳನ್ನು ಹೊತ್ತು
ಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT