ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ದೆಹಲಿ ಅರಬ್‌ಲೀಗ್‌ ಕಟ್ಟಡ ಪ್ಯಾಲೆಸ್ಟೀನ್‌ ವಶಕ್ಕೆ

Published 6 ಫೆಬ್ರುವರಿ 2024, 23:01 IST
Last Updated 6 ಫೆಬ್ರುವರಿ 2024, 23:01 IST
ಅಕ್ಷರ ಗಾತ್ರ

ದೆಹಲಿ ಅರಬ್‌ಲೀಗ್‌ ಕಟ್ಟಡ ಪ್ಯಾಲೆಸ್ಟೀನ್‌ ವಿದ್ಯಾರ್ಥಿಗಳ ವಶಕ್ಕೆ

ನವದೆಹಲಿ, ಫೆ. 6– ಇಲ್ಲಿನ ಗಾಲ್ಫ್‌ಲಿಂಕ್ಸ್‌ ಪ್ರದೇಶದಲ್ಲಿರುವ ಅರಬ್‌ಲೀಗ್‌ ಕಚೇರಿಯನ್ನು ಐವತ್ತಕ್ಕೂ ಹೆಚ್ಚು ಪ್ಯಾಲೆಸ್ಟೀನ್‌ ವಿದ್ಯಾರ್ಥಿಗಳು ಇಂದು ಆಕ್ರಮಿಸಿಕೊಂಡರು.

ಅರಬ್‌– ಇಸ್ರೇಲಿ ಸೈನಿಕರ ವಾಪಸಾತಿಗೆ ಜಿನೀವಾದಲ್ಲಿ ಮೂಡಿದ ಒಪ್ಪಂದವನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಈ ಕ್ರಮ ಕೈಗೊಂಡಿದ್ದಾರೆ.

ಅರಬ್‌ಲೀಗ್‌ ರಾಜತಾಂತ್ರಿಕ ಆಯೋಗದ ಪ್ರಮುಖ ಪ್ರತಿನಿಧಿ ಇಬ್ರಾಹಿಂ ಅವರ ನಿವಾಸವು ಇದೇ ಕಟ್ಟಡದಲ್ಲಿದ್ದು, ಒಂದು ಗಂಟೆಯ ನಂತರ ಅವರು ಅದನ್ನು ಬಿಟ್ಟು ಹೊರಟರು.

ಗುಜರಾತ್‌ ಹಿಂಸಾಕಾಂಡ ಅಂತ್ಯಕ್ಕೆ ಇಂದಿರಾ ಕರೆ

ರುಡೌಲಿ, (ಉತ್ತರ ಪ್ರದೇಶ) ಫೆ. 6– ‘ಶಾಂತಿ ಸ್ಥಾಪನೆಯಾದಾಗ ಮಾತ್ರ ಜನರ ಕುಂದು
ಕೊರತೆಗಳನ್ನು ಸರಿಪಡಿಸಬಹುದಾದುದರಿಂದ ಗುಜರಾತಿನಲ್ಲಿ ಹಿಂಸಾಚಾರ ನಿಲ್ಲಿಸಬೇಕು’ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಕರೆ ಕೊಟ್ಟರು.

ಬಹಿರಂಗ ಸಭೆಯಲ್ಲಿ ಮಾತನಾಡಿದ ಶ್ರೀಮತಿ ಗಾಂಧಿ, ಶಾಂತಿ ಸ್ಥಾಪನೆಯಾದಾಗ ಸರ್ಕಾರ ವಿವಿಧ ಜನಾಭಿಪ್ರಾಯಗಳನ್ನು ಕೇಳಿ ಅದಕ್ಕನುಗುಣವಾಗಿ ವರ್ತಿಸಬಹುದು. ಕಾನೂನುಬಾಹಿರ ಚಟುವಟಿಕೆ ಮತ್ತು ಹಿಂಸಾಚಾರ ಮುಂದುವರಿಯುತ್ತಿದ್ದರೆ ನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT