ಗುರುವಾರ , ಫೆಬ್ರವರಿ 25, 2021
19 °C

ಪ್ರಜಾವಾಣಿ 50 ವರ್ಷಗಳ ಹಿಂದೆ: ಭಾನುವಾರ 17–1–1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ಯೋಜನೆಗಳ ಕಾರ್ಯಗತಕ್ಕೆ ಮುಖ್ಯಮಂತ್ರಿ ಸಂಕಲ್ಪ

ಮೈಸೂರು, ಜ.16– ಕೇಂದ್ರ ಸರ್ಕಾರದಿಂದ ತಾಂತ್ರಿಕ ಮಂಜೂರಾತಿ ಬರಲಿ ಬಿಡಲಿ ಕಾವೇರಿ ನದಿ ಪಾತ್ರದಲ್ಲಿ ಈಗ ಕೈಗೊಳ್ಳಲಾಗಿರುವ ನೀರಾವರಿ ಜಲಾಶಯಗಳನ್ನು ಭರದಿಂದ ಮುಂದುವರಿಸಿ ಪೂರೈಸುವ ತಮ್ಮ ಸಂಕಲ್ಪವನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ಸ್ಪಷ್ಟಪಡಿಸಿದರು.

ಹೆಗ್ಗಡದೇವನಕೋಟೆ ತಾಲ್ಲೂಕಿನ ತಾರಕ ಜಲಾಶಯದ ಶಂಕುಸ್ಥಾಪನೆ ಮಾಡಿದ ಶ್ರೀ ಪಾಟೀಲರು ತಾರಕ ಯೋಜನೆ ಬಿಟ್ಟು ಮತ್ತೆ ಯಾವುದಕ್ಕೂ ತಾಂತ್ರಿಕ ಮಂಜೂರಾತಿ ಸಿಕ್ಕಿಲ್ಲ. ಆದರೂ, ಕಪಿಲಾ, ಹೇಮಾವತಿ, ಹಾರಂಗಿ ಜಲಾಶಯಗಳ ಕಾರ್ಯ ಭರದಿಂದ ನಡೆಯುತ್ತಿದೆ ಎಂದು ಹೇಳಿ, ಏನೇ ಆದರೂ ಈ ಜಲಾಶಯಗಳ ಕೆಲಸವನ್ನು ನಿಲ್ಲಿಸುವುದಿಲ್ಲ. ಈಗ ನಡೆಯುತ್ತಿರುವ ರೀತಿಯಲ್ಲೇ ಕೆಲಸ ಮುಂದುವರಿಸಿ ಒಂದೆರಡು ವರ್ಷಗಳಲ್ಲೇ ಜಲಾಶಯ ನಿರ್ಮಾಣವನ್ನು ಪೂರೈಸಲಾಗುವುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು