ದಂಡಿನ ದಮನದ ದವಡೆಯಲ್ಲಿ ‘ಸ್ವತಂತ್ರ ಬಾಂಗ್ಲಾದೇಶ’ದ ಉದಯ

ನವದೆಹಲಿ, ಮಾರ್ಚ್ 26– ಪೂರ್ವ ಪಾಕಿಸ್ತಾನದಲ್ಲಿ ಅಂತರ್ಯುದ್ಧ ಪ್ರಾರಂಭವಾಗಿದ್ದು, ಢಾಕಾ ಮತ್ತು ಪ್ರಾಂತ್ಯದ ಇತರ ಕಡೆಗಳಲ್ಲಿ ಪಾಕಿಸ್ತಾನದ ಸೈನ್ಯ ಹಾಗೂ ಪೂರ್ವ ಪಾಕಿಸ್ತಾನ್ ರೈಫಲ್ ಪಡೆ ಮತ್ತು ಪೊಲೀಸರ ನಡುವೆ ನಡೆಯುತ್ತಿರುವ ಭೀಕರ ಹೋರಾಟದಲ್ಲಿ ಭಾರಿ ಸಾವು–ನೋವು ಉಂಟಾಗಿದೆಯೆಂದು ಇತ್ತೀಚೆಗೆ ಬಂದ ಸುದ್ದಿ ತಿಳಿಸಿದೆ.

‘ಬಂಗಾಳ ದೇಶ ಉದಯವಾಯಿತು’ ಎಂದು ಅವಾಮಿ ಲೀಗ್ ನಾಯಕ ಷೇಖ್ ಮುಜೀಬುರ್ ರೆಹಮಾನ್ ಅವರು ‘ಸ್ವಾಧಿನ್ ಬಾಂಗ್ಲಾ’ (ಸ್ವತಂತ್ರ ಬಂಗಾಳ) ಬೇತರ್ ಕೇಂದ್ರದಿಂದ ಮಾತನಾಡುತ್ತಾ ಘೋಷಿಸಿದರು.

ರಾಜ್ಯಕ್ಕೆ ಸ್ವಲ್ಪ ಸಮಯ ರಾಷ್ಟ್ರಪತಿ ಆಡಳಿತ

ಬೆಂಗಳೂರು, ಮಾರ್ಚ್ 26– ಮೈಸೂರು ರಾಜ್ಯ ತನ್ನ ಇತಿಹಾಸದಲ್ಲೇ ಪ್ರಥಮವಾಗಿ ಕೆಲ ಕಾಲದವರೆಗೆ ರಾಷ್ಟ್ರಪತಿ ಆಡಳಿತಕ್ಕೆ ಒಳಪಡಲಿದೆ.

ರಾಜ್ಯದ ವಿಧಾನಸಭೆಯನ್ನು ಕೆಲಕಾಲ ಸ್ಥಗಿತಗೊಳಿಸಿ (ಸಸ್ಪೆಂಡ್) ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕೆಂದು ರಾಜ್ಯಪಾಲ ಶ್ರೀ ಧರ್ಮವೀರ ಅವರು ಇಂದು ಮಧ್ಯಾಹ್ನ ರಾಷ್ಟ್ರಪತಿಗೆ ತಮ್ಮ ಶಿಫಾರಸನ್ನು ಕಳುಹಿಸಿಕೊಟ್ಟರು.

ಶ್ರೀ ವೀರೇಂದ್ರ ಪಾಟೀಲ್ ಅವರ ಮಂತ್ರಿಮಂಡಲ ರಾಜೀನಾಮೆ ನೀಡಿದ ನಂತರ ಇಂದಿನವರೆಗೆ ಆಡಳಿತ ಕಾಂಗ್ರೆಸ್ಸಿಗಾಗಲಿ ಮತ್ತಿತರ ಯಾವ ಪಕ್ಷಕ್ಕೇ ಆಗಲಿ ಹೊಸ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.