ಬೆಂಗಳೂರು, ಅ.13– ಕರ್ನಾಟಕ ಪ್ರದೇಶ ಆಡಳಿತ ಕಾಂಗ್ರೆಸ್ಸಿನ ದ್ವಿತೀಯ ಚುನಾಯಿತ ಅಧ್ಯಕ್ಷರಾಗಿ 49 ವರ್ಷ ವಯಸ್ಸಿನ ಆಹಾರ ಸಚಿವ ಕೃಷ್ಣೇಗೌಡ ಹನುಮಂತಗೌಡ ಪಾಟೀಲರು ಇಂದು ಅವಿರೋಧವಾಗಿ ಆಯ್ಕೆಯಾದರು.

ಸರ್ವಾನುಮತದ ಆಯ್ಕೆ ಸುಮಾರು ಮೂರು ಗಂಟೆಗಳ ಕಾಲ ಡೋಲಾಯಮಾನ ಪರಿಸ್ಥಿತಿ
ಯಲ್ಲಿ ಇತ್ತು. ಎ.ಐ.ಸಿ.ಸಿ ಪ್ರತಿನಿಧಿಗಳಾದ ಕೇಂದ್ರದ ಶಾಖಾರಹಿತ ಸಚಿವ ಉಮಾಶಂಕರ ದೀಕ್ಷಿತ್ ಅವರು ಸೂಚಿತವಾಗಿದ್ದ ಅಭ್ಯರ್ಥಿಗಳಲ್ಲಿ ವಿ.ಎಲ್. ಪಾಟೀಲ್ ಮತ್ತು ಆರ್. ದಯಾನಂದಸಾಗರ್
ಅವರು ಸ್ಪರ್ಧೆಯಿಂದ ಹಿಂದೆ ಸರಿದಿ ರುವುದರಿಂದ ಕೆ.ಎಚ್.ಪಾಟೀಲರು ಅವಿರೋಧವಾಗಿ ಆಯ್ಕೆಯಾಗಿರುವರೆಂದು ಪ್ರಕಟಿಸಿದ್ದು, ಹೊರಗೆ ಕಾದು ನಿಂತಿದ್ದವರಿಗೆ ಹಾಗೂ ಅನೇಕ ಮಂದಿ ಕೆ.ಪಿ.ಸಿ.ಸಿ
ಸದಸ್ಯರಿಗೆ ತೀರಾ ಅನಿರೀಕ್ಷಿತವಾದ ಸುದ್ದಿಯಂತಿತ್ತು.

ಐಟಿಐನಲ್ಲಿ ಎಂಜಿನಿಯರ್ ಹುದ್ದೆಗೆ ಪರೀಕ್ಷೆ ಗೊಂದಲದಲ್ಲಿ ಅಂತ್ಯ

ಬೆಂಗಳೂರು, ಅ. 13– ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ಗಳ ಆಯ್ಕೆಗಾಗಿ ಇಂದು ಇಂಡಿಯನ್ ಟೆಲಿಫೋನ್ ಕಾರ್ಖಾನೆ ಏರ್ಪಡಿಸಿದ್ದ ಪರೀಕ್ಷೆ ಅವ್ಯವಸ್ಥೆಯ ಫಲವಾಗಿ ಗೊಂದಲಕ್ಕೆಡೆಗೊಟ್ಟಿತೆಂದು ವರದಿಯಾಗಿದೆ.

ದೂರವಾಣಿ ನಗರದ ವಿದ್ಯಾಮಂದಿರ ದಲ್ಲಿ ಬೆಳಿಗ್ಗೆ 9ಕ್ಕೆ ನಡೆಯಬೇಕಾಗಿದ್ದ ಪರೀಕ್ಷೆಗಾಗಿ ನೂರಾರು ಮಂದಿ ಅಭ್ಯರ್ಥಿ ಗಳಿಗೆ ಸಾಕಷ್ಟು ಸ್ಥಳಾವಕಾಶವೇ ಇಲ್ಲದ್ದು ಗೊಂದಲದ ಪರಿಸ್ಥಿತಿಗೆ ಕಾರಣವಾಗಿ, ಪರೀಕ್ಷೆ ಪ್ರಾರಂಭವಾಗಲು ಒಂದೂಕಾಲು ಗಂಟೆ ಸಮಯ ಬೇಕಾಯಿತೆಂದು ಹೇಳಲಾಗಿದೆ. ಜೊತೆಗೆ ಗಲಿಬಿಲಿಯಲ್ಲಿ ಕೆಲ ಅಭ್ಯರ್ಥಿಗಳು ದಾಖಲೆಪತ್ರ ಕಳೆದುಕೊಂಡದ್ದು ಅದಕ್ಕೆ ಕಾರಣವಾಯಿತೆನ್ನಲಾಗಿದೆ.

ಅಧಿಕಾರಿಗಳು ಅಭ್ಯರ್ಥಿಗಳಿಗೆ ಸ್ಥಾನಗಳನ್ನು ಸರಿಯಾಗಿ ಗುರುತಿಸಿರಲಿಲ್ಲ
ವೆಂದು ಅದಕ್ಕೆ ಹಾಜರಾಗಿದ್ದ ಹಲವು ವಿದ್ಯಾರ್ಥಿಗಳು ದೂರಿದ್ದಾರೆ. ಸುಮಾರು ಒಂದು ಸಾವಿರ ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಕೂರಬಯಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.