ಆಳವಾದ ಶೋಧನೆಗೆ ವಿಶೇಷ ಅಧಿಕಾರಿ ನೇಮಕ ಸಂಭವ
ಬೆಂಗಳೂರು, ಆ. 11– ಭದ್ರಾವತಿ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯ ಕೆಲವು ವ್ಯವಹಾರಗಳ ಬಗ್ಗೆ ‘ಆಳವಾದ ಶೋಧನೆ’ ಅಗತ್ಯವೆಂದು ಶ್ರೀ ಆರ್.ಸಿ.ದತ್ ಅವರು ಹೇಳಿರುವ ವಿಷಯಗಳನ್ನು ಪರಿಶೀಲಿಸಲು ವಿಶೇಷ ಅಧಿಕಾರಿಯೊಬ್ಬರನ್ನು ಸರ್ಕಾರ ನೇಮಿಸುವ ಸಂಭವವಿದೆ.
ಕೈಗಾರಿಕಾ ಸಚಿವ ಶ್ರೀ ಎಸ್.ಎಂ.ಕೃಷ್ಣ ಅವರು ಇಂದು ಈ ಸೂಚನೆಯನ್ನು ವರದಿಗಾರರಿಗೆ ನೀಡಿದರು.
‘ದತ್ ಸಮಿತಿಯ ವರದಿಯನ್ನು ಮಂತ್ರಿಮಂಡಲದ ಮುಂದೆ ಮಂಡಿಸುತ್ತೇನೆ. ಅವರ ಶಿಫಾರುಗಳ ಬಗ್ಗೆ ಮಂತ್ರಿಮಂಡಲ ತೀರ್ಮಾನ ಕೈಗೊಳ್ಳುವುದು’ ಎಂದು ದತ್ ವರದಿಯನ್ನು ವರದಿಗಾರರಿಗೆ ಬಿಡುಗಡೆ ಮಾಡಿದಾಗ ಸಚಿವರು ಹೇಳಿದರು.
ನ್ಯಾಯಾಂಗ ಕಾರ್ಯಾಂಗದ ಕೈಗೊಂಬೆ ಆಗುವ ಭಯ
ನವದೆಹಲಿ, ಆ. 11– ನ್ಯಾಯಾಧೀಶರನ್ನು ನೇಮಿಸುವ ಬಗೆಗೆ ಸರ್ಕಾರ ಅನುಸರಿಸುತ್ತಿರುವ ನೀತಿಯನ್ನು ನೋಡಿದರೆ ‘ನ್ಯಾಯಾಂಗವನ್ನು ಕಾರ್ಯಾಂಗದ ಕೈಗೊಂಬೆಯನ್ನಾಗಿ ಮಾಡುವ’ ಮತ್ತು ‘ಪ್ರಜಾಸತ್ತಾತ್ಮಕ ವ್ಯವಸ್ಥೆ ಪ್ರತಿಪಾದಿಸುವುದನ್ನೆಲ್ಲಾ ತಲೆಕೆಳಗು ಮಾಡುವ’ ಭಯ ತಲೆದೋರಿದೆ.
ಅಖಿಲ ಭಾರತ ವಕೀಲರ ಸಮ್ಮೇಳನದಲ್ಲಿ ಮಾತನಾಡಿದ ಹಿರಿಯ ವಕೀಲರು ಇಂದು ಈ ಭಯ ವ್ಯಕ್ತಪಡಿಸಿದರು.
ಸರ್ಕಾರ ಹೊಂದಿರುವ ಧೋರಣೆಯನ್ನು ತಳೆದಿರುವ ವ್ಯಕ್ತಿಗಳನ್ನೇ ನ್ಯಾಯಾಧೀಶರ ಹಿರಿಯ ಸ್ಥಾನಗಳಿಗೆ ಆಯ್ಕೆ ಮಾಡುವ ಸರ್ಕಾರದ ನೀತಿಯನ್ನು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಾಜಿ ಅಟಾರ್ನಿ ಜನರಲ್ ಎಂ.ಸಿ.ಸಟೆಲ್‌ವಾಡ್ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.