ಜನಸಂಘದಿಂದ ಬಲರಾಜ ಮಧೋಕ್ ಉಚ್ಚಾಟನೆ
ನವದೆಹಲಿ, ಮಾರ್ಚ್ 13– ಜನಸಂಘದ ಮಾಜಿ ಅಧ್ಯಕ್ಷ ಬಲರಾಜ ಮಧೋಕ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮೂರು ವರ್ಷಗಳ ಕಾಲ ತೆಗೆದು ಹಾಕಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎಸ್.ಎನ್.ಭಂಡಾರಿ ಅವರು ಇಂದು ಇಲ್ಲಿ ಪ್ರಕಟಿಸಿದರು.
‘ಪಕ್ಷ ವಿರುದ್ಧದ ಚಟುವಟಿಕೆಗಳು ಮತ್ತು ಹೇಳಿಕೆಗಳಲ್ಲಿ’ ಮಧೋಕ್ ತೊಡಗಿದ್ದುದೇ ಅವರ ಉಚ್ಚಾಟನೆಗೆ ಕಾರಣವೆಂದು ಭಂಡಾರಿ ಹೇಳಿದರು.
ಕಳೆದ ತಿಂಗಳು ಕಾನ್ಪುರದಲ್ಲಿ ಪಕ್ಷದ ಜನರಲ್ ಕೌನ್ಸಿಲ್ ಅಂಗೀಕರಿಸಿದ ನಿರ್ಣಯವನ್ನನುಸರಿಸಿ ಪಕ್ಷದ ಅಧ್ಯಕ್ಷ ಎಲ್.ಕೆ. ಅಡ್ವಾಣಿಯವರು ಈ ಕ್ರಮ ಕೈಗೊಂಡಿರುವುದಾಗಿ ಪ್ರಧಾನ ಕಾರ್ಯದರ್ಶಿಯ ಪ್ರಕಟಣೆ ತಿಳಿಸಿದೆ.
ಪಾಕ್‌ಗೆ ಅಮೆರಿಕ ಶಸ್ತ್ರಾಸ್ತ್ರ: ಲೋಕಸಭೆ ಸದಸ್ಯರ ಕಳವಳ
ನವದೆಹಲಿ, ಮಾರ್ಚ್ 13– ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಪುನರಾರಂಭಿಸಲು ಅಮೆರಿಕ ಆಲೋಚಿಸುತ್ತಿದೆಯೆಂಬ ವರದಿ ಕುರಿತು ಲೋಕಸಭೆಯಲ್ಲಿ ಇಂದು ಎಲ್ಲ ಪಕ್ಷಗಳ ಸದಸ್ಯರೂ ತೀವ್ರ ಕಳವಳ ವ್ಯಕ್ತಪಡಿಸಿ, ಈ ವಿಷಯದಲ್ಲಿ ಸರ್ಕಾರ ಶೀಘ್ರವೇ ಹೇಳಿಕೆ ಕೊಡುವಂತೆ ಒತ್ತಾಯ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.