ರಾಜ್ಯಕ್ಕೆ ‘ಕರ್ನಾಟಕ’ ಹೆಸರು: ವಿಧೇಯಕಕ್ಕೆ ಲೋಕಸಭೆ ಅಸ್ತು
ನವದೆಹಲಿ, ಜುಲೈ 30– ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಡಲು ವಿಧೇಯಕವನ್ನು ಲೋಕಸಭೆ ಇಂದು ಹರ್ಷೋದ್ಗಾರಗಳಿಂದ ಸ್ವಾಗತಿಸಿ ಅಂಗೀಕರಿಸಿತು. ವಿಧೇಯಕವನ್ನು ಮಂಡಿಸಿದ ಕೇಂದ್ರ ಗೃಹ ಖಾತೆಯ ಸ್ಟೇಟ್ ಸಚಿವ ಕೆ.ಸಿ. ಪಂತ್ ಅವರು ಚರ್ಚೆಗೆ ಉತ್ತರ ನೀಡಿ, ರಾಜ್ಯದ ಜನತೆಗೆ ಶುಭ ಹಾರೈಸಿದರು. ಅನೇಕ ದಿಶೆಗಳಲ್ಲಿ ರಾಜ್ಯವು ‘ಅಸೂಯೆ ಪಡುವಂತಹ’ ದಾಖಲೆಗಳನ್ನು ರಾಜ್ಯ ಪಡೆದಿದೆ ಎಂದರು.