ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಪ್ರಮುಖ ಬಂದರಾಗಿ ‘ಹೊಸ ಮಂಗಳೂರು’

Published 6 ಮೇ 2024, 0:09 IST
Last Updated 6 ಮೇ 2024, 0:09 IST
ಅಕ್ಷರ ಗಾತ್ರ

ಸರ್ಕಾರದ ಬಿಗಿ ನಿಲುವು: ಬಂಧಿತರ ಬಿಡುಗಡೆ ಸಂಧಾನಕ್ಕೆ ವಿರೋಧಿಗಳ ಕರೆ

ನವದೆಹಲಿ, ಮೇ 5– ಮೇ 8ರಿಂದ ಆರಂಭಿಸಲುದ್ದೇಶಿಸಿರುವ ರೈಲ್ವೆ ಮುಷ್ಕರದ ಬಗ್ಗೆ ಸರ್ಕಾರದ ಗಡಸು ಧೋರಣೆ ಮುಂದುವರಿದಿದ್ದು, ಈ ಮಧ್ಯೆ ಇಂದು ಇಲ್ಲಿ ಸಭೆ ಸೇರಿದ್ದ ಐದು ವಿರೋಧ ಪಕ್ಷಗಳ ಪ್ರತಿನಿಧಿಗಳು ಬಂಧಿತ ರೈಲ್ವೆ ನಾಯಕರುಗಳನ್ನು ತಕ್ಷಣ ಬಿಡುಗಡೆ ಮಾಡಿ ಸಂಧಾನ ಪುನರಾರಂಭಿಸುವಂತೆ ಮನವಿ ಮಾಡಿದ್ದಾರೆ.

ಜನತೆಯನ್ನು ತಪ್ಪು ಹಾದಿಗೆಳೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ರೈಲ್ವೆ ನೌಕರರ ಮುಷ್ಕರದ ಬಗ್ಗೆ ಸುಳ್ಳು ಹೇಳಿಕೆಗಳನ್ನು
ಮುಂದೊಡ್ಡುತ್ತಿದೆಯೆಂದು ವಿರೋಧ ಪಕ್ಷಗಳ ಪ್ರತಿನಿಧಿಗಳು ಇಂದು ಇಲ್ಲಿ ಆಪಾದಿಸಿದರು.

ಪ್ರಮುಖ ಬಂದರಾಗಿ ‘ಹೊಸ ಮಂಗಳೂರು’

ನವದೆಹಲಿ, ಮೇ 5– ಮಂಗಳೂರು ಬಂದರು ಯೋಜನೆ ಪ್ರದೇಶ ಇನ್ನು ಮುಂದೆ ‘ಹೊಸ ಮಂಗಳೂರು’ ಎಂಬ ಅಭಿನಾಮ ಪಡೆದು ಭಾರತದ ಒಂಬತ್ತನೆಯ ಪ್ರಮುಖ ಬಂದರಾಗಿ ಪರಿಗಣಿಸಲ್ಪಡಲಿದೆ.

ಹೊಸ ಮಂಗಳೂರಿನಲ್ಲಿ ಮೂರು ಹಡಗು ನಿಲ್ದಾಣಗಳಿರುತ್ತವೆ. ಮಾಮೂಲಿ ಸರಕು ಸಾಗಾಣಿಕೆ ಹಡಗುಗಳಿಗಾಗಿ ಒಂದು; ಕಬ್ಬಿಣ, ಮ್ಯಾಂಗನೀಸ್‌ಗಳ ಅದಿರು, ಕಲ್ಲಿದ್ದಲು ಮತ್ತು ಕಟ್ಟ ಇವುಗಳ ರಫ್ತು ಹಡಗುಗಳಿಗಾಗಿ ಇನ್ನೊಂದು; ಕಚ್ಚಾ ಸಾಮಗ್ರಿ ಹಾಗೂ ಗೊಬ್ಬರಗಳ ಆಮದು ಹಡಗುಗಳಿಗಾಗಿ ಮತ್ತೊಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT