ಶನಿವಾರ, ಏಪ್ರಿಲ್ 1, 2023
32 °C

ಮಂಗಳವಾರ, 30–1–1973: ಕರ್ನಾಟಕ ಪೊಲೀಸರ ಹೊಸ ಉಡುಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಪೊಲೀಸರ ಹೊಸ ಉಡುಪು

ಬೆಂಗಳೂರು, ಜ. 29– ಮೈಸೂರಿನ ಹೆಸರು ಬದಲಾಗಿ ಕರ್ನಾಟಕ ಎಂದು ನಾಮಕರಣ ಆಗುವ ದಿನದಿಂದ ರಾಜ್ಯದ ಪೊಲೀಸರ ಸಾಂಪ್ರದಾಯಿಕ ಉಡುಪುಗಳೂ ಬದಲಾಗಲಿವೆ. ಪೊಲೀಸರ ಮಾಮೂಲಿ ಪೇಟ ಇನ್ನುಮುಂದೆ ಕಾಣಬರದು. ಅದರ ಬದಲು ಸಶಸ್ತ್ರ ಪೊಲೀಸರು ಸಾಮಾನ್ಯವಾಗಿ ಧರಿಸುವ (ಉಕ್ಕಿನ ಶಿರಸ್ತ್ರಾಣವಲ್ಲ) ಒಂದೆಡೆ ಮೇಲೆ ಬಾಗಿದ ಹ್ಯಾಟ್‌, ಪೇದೆಗಳು ಧರಿಸುವ ಖಾಕಿ ನಿಕ್ಕರ್‌ ಬದಲು ಪ್ರತಿಯೊಬ್ಬರೂ ಖಾಕಿ ಪ್ಯಾಂಟ್‌ಗಳಲ್ಲಿ ಶೋಭಿಸುವರು. ಸಾಮಾನ್ಯ ಪೊಲೀಸರಿಗೆ ಈವರೆಗೆ ನೀಡುತ್ತಿದ್ದ ಭಾರವಾದ ಲೇಸ್‌ಬೂಟ್‌ ಬದಲಿಗೆ ಹಗುರವಾದ ಬಕಲ್‌ಸಮೇತ ಬೂಟ್‌ಗಳಿರುವುವು.

ಷರಾಯಿ ಒದಗಿಸಲಿರುವುದರಿಂದ ಉದ್ದನೆಯ ಕಾಲುಚೀಲ ಮೊದಲಾದವು ಮಾಯವಾಗಲಿವೆ. ಹಾವಿನ ಪಟ್ಟಿ ರೀತಿಯ ಬೆಲ್ಟ್‌ ಜಾಗದಲ್ಲಿ ಚರ್ಮದ ಬೆಲ್ಟ್‌. ಅದರ ಮೇಲೆ ಕರ್ನಾಟಕ ಪೊಲೀಸ್‌ ಎಂಬ ಆಲಂಕಾರಿಕ ಬಕಲ್‌, ಓಪನ್‌ ಕಾಲರ್‌ ಮೊದಲಾದವು ನೂತನ ಸಮವಸ್ತ್ರದ ಅಂಗಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು