ಸೋಮವಾರ, ನವೆಂಬರ್ 30, 2020
27 °C

ಪ್ರಜಾವಾಣಿ 50 ವರ್ಷಗಳ ಹಿಂದೆ| ಗುರುವಾರ, 5–11–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

7ನೇ ತರಗತಿಗೆ ಸಪ್ಲಿಮೆಂಟರಿ ಪರೀಕ್ಷೆ– ಸರ್ಕಾರದ ಪರಿಶೀಲನೆ?

ಬೆಂಗಳೂರು, ನ. 4– ಜಿಲ್ಲಾ ಮಟ್ಟದಲ್ಲಿ ಏಳನೇ ತರಗತಿಯ ಸಪ್ಲಿಮೆಂಟರಿ ಪರೀಕ್ಷೆಗಳನ್ನು ನಡೆಸುವ ವಿಷಯ ಸರ್ಕಾರದ ಪರಿಶೀಲನೆಯಲ್ಲಿದೆ.

ರಾಜ್ಯ ಶಿಕ್ಷಣ ಸಲಹಾ ಮಂಡಲಿಯು ಪರಿಶೀಲಿಸಿದ ನಂತರ ಸರ್ಕಾರ ಈ ಕುರಿತು ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

ಶಾಲೆಗೊಂದು ಸೇವಿಂಗ್ಸ್‌ ಬ್ಯಾಂಕ್‌

ನವದೆಹಲಿ, ನ. 4– ಅಂಚೆ ಮತ್ತು ತಂತಿ ಇಲಾಖೆಗೆ ಕಾರ್ಯನಿರ್ವಹಣೆಗಾಗಿ ಕೊಡುವ ವೆಚ್ಚದಲ್ಲಿ ‘ಸಾಕಷ್ಟು ಉಳಿತಾಯ’ ಮಾಡಲು ಶಾಲೆಗಳಲ್ಲಿ ಸೇವಿಂಗ್ಸ್‌ ಬ್ಯಾಂಕ್‌ಗಳನ್ನು ಸ್ಥಾಪಿಸುವ ಯೋಜನೆಯೊಂದು ಕೇಂದ್ರ ಹಣಕಾಸು ಸಚಿವ ಶಾಖೆ ಪರಿಶೀಲನೆಯಲ್ಲಿದೆ.

ಸಣ್ಣ ಉಳಿತಾಯ ಕುರಿತು ತಲ್ಯಾರ್‌ ಖಾನ್‌ ಸಮಿತಿ ಸಲ್ಲಿಸಿರುವ ಈ ಯೋಜನೆಯನ್ನು ಕೆಲವು ಶಾಲೆಗಳಲ್ಲಿ ಮೊದಲು ಪ್ರಾರಂಭಿಸಬಹುದು.

ಎಲ್ಲ ಸ್ಥಳೀಯ ಅಭ್ಯರ್ಥಿಗಳಿಗೂ ಉದ್ಯೋಗ

ಬೆಂಗಳೂರು, ನ. 4– 1965ರ ಜನವರಿ 1 ಮತ್ತು ಆನಂತರ ನೇಮಕಗೊಂಡ ಸ್ಥಳೀಯ ಅಭ್ಯರ್ಥಿಗಳಿಗೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸೇವಕರ ಹುದ್ದೆಗಳ ಜೊತೆಗೆ ನಾನಾ ಇಲಾಖೆಗಳಲ್ಲಿ ಮೂರನೇ ದರ್ಜೆಯ ಹುದ್ದೆಗಳಿಗೂ ನೇಮಕ ಮಾಡಲು ಸರ್ಕಾರ ನಿರ್ಧರಿಸಿದೆ.

ಇಂದು ನಡೆದ ಮಂತ್ರಿಮಂಡಲದ ಸಭೆ, ಸ್ಥಳೀಯ ಅಭ್ಯರ್ಥಿಗಳಿಗೆ ನೌಕರಿ ಒದಗಿಸುವುದಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ತಿನಲ್ಲಿ ಮುಖ್ಯಮಂತ್ರಿ ನೀಡಿದ ಹೇಳಿಕೆಯನ್ನನುಸರಿಸಿ ಕೆಲವು ತೀರ್ಮಾನಗಳನ್ನು ಕೈಗೊಂಡಿತು.

ಗ್ರಾಮ ಲೆಕ್ಕಾಧಿಕಾರಿಗಳ ಹುದ್ದೆಗೆ ನೇಮಕವಾಗಲು ಸ್ಥಳೀಯ ಅಭ್ಯರ್ಥಿಗಳು ಅರ್ಹರೆಂದು ಪರಿಗಣಿಸಲಾಗಿದೆ. ಗ್ರಾಮ ಸೇವಕರ ಹುದ್ದೆಗಳಿಗೆ ನೇಮಕವಾಗಲೂ ಅರ್ಹರೆಂದು ಪರಿಗಣಿಸಲಾಗುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು