ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಡೆಮಾಸ್ಕಸ್‌ ಮೇಲೆ ಇಸ್ರೇಲಿ ಷೆಲ್‌

Published 14 ಅಕ್ಟೋಬರ್ 2023, 19:07 IST
Last Updated 14 ಅಕ್ಟೋಬರ್ 2023, 19:07 IST
ಅಕ್ಷರ ಗಾತ್ರ

ಡೆಮಾಸ್ಕಸ್‌ ಮೇಲೆ ಇಸ್ರೇಲಿ ಷೆಲ್‌: ಸೈನ್ಯದಲ್ಲಿ ಉಗ್ರ ಟ್ಯಾಂಕ್ ಕಾಳಗ

ಟೆಲ್‌ ಅವೀವ್‌: ಸಿರಿಯಾದ ಮಿಲಿಟರಿ ಕೋಟೆಯನ್ನು ಧೂಳಿಪಟ ಮಾಡಿ ಮುನ್ನುಗ್ಗುತ್ತಿರುವ ಇಸ್ರೇಲ್‌ ಪಡೆಗಳು ಭಾನುವಾರ ಡೆಮಾಸ್ಕಸ್‌ ನಗರಕ್ಕೆ ಕೇವಲ 25 ಕಿ.ಮೀ ದೂರದಲ್ಲಿದ್ದು, ಡೆಮಾಸ್ಕಸ್‌ ಉಪನಗರಗಳ ಮೇಲೆ ಷೆಲ್‌ ದಾಳಿ ಆರಂಭಿಸಿವೆಯೆಂದು ಟೆಲ್‌ ಅವೀವ್‌ ತಿಳಿಸಿದೆ.

ಸಿರಿಯಾ ರಂಗದಲ್ಲಿ ಯುದ್ಧ ಅಕ್ಷರಶಃ ನಿರ್ಧಾರವಾಗಿ ಹೋಗಿದೆ. ಇಸ್ರೇಲಿ ಪಡೆಗಳು ಇಲ್ಲಿ ತಮ್ಮ ಹತೋಟಿ ಸಾಧಿಸಿವೆ ಎಂದು ಟೆಲ್‌ ಅವೀವ್‌ ಹೇಳಿದೆ.

ಸೂಯೆಜ್‌ ಕಾಲುವೆ ರಣರಂಗದಲ್ಲಿ ಇಸ್ರೇಲ್‌ ಈಜಿಪ್ಟ್‌ ಪಡೆಗಳ ಉಗ್ರ ಆಕ್ರಮಣವನ್ನು ಎದುರಿಸುತ್ತಿದ್ದು, ಇನ್ನೂರಕ್ಕೂ ಹೆಚ್ಚು ಈಜಿಪ್ಟ್‌ ಟ್ಯಾಂಕುಗಳನ್ನು ನಾಶಪಡಿಸಿದೆಯೆಂದು ಇಸ್ರೇಲ್‌ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT