ಶುಕ್ರವಾರ, ಮಾರ್ಚ್ 5, 2021
30 °C

50 ವರ್ಷಗಳ ಹಿಂದೆ: ಮಂಗಳವಾರ 29-12-1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಜನ್ ಶಿಫಾರಸು ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ಕರೆ
ಬೆಂಗಳೂರು, ಡಿ. 28–
ಕೇಂದ್ರ ಸರ್ಕಾರ ಈಗಲಾದರೂ ‘ತಪ್ಪು ತಿದ್ದಿಕೊಂಡು’ ಮಹಾಜನ್ ಆಯೋಗದ ಶಿಫಾರಸುಗಳನ್ನೊಳಗೊಂಡ ವಿಧೇಯಕವನ್ನು ತಂದು ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಶಿಕ್ಷಣ ಸಚಿವರೂ ಸಭಾ ನಾಯಕರೂ ಆದ ಶ್ರೀ ಕೆ.ವಿ.ಶಂಕರಗೌಡರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಶನಿವಾರ ಅರ್ಥ ಸಚಿವ ಶ್ರೀರಾಮಕೃಷ್ಣ ಹೆಗಡೆಯವರು ಮಂಡಿಸಿದ ಪ್ರಸ್ತಾಪದ ಮೇಲಿನ ಚರ್ಚೆಗೆ ಉತ್ತರ ನೀಡಿದ ಶ್ರೀ ಶಂಕರಗೌಡರು, ಗಡಿ ಆಯೋಗಗಳ ಶಿಫಾರಸುಗಳ ಸಂಬಂಧದಲ್ಲಿ ಕೇಂದ್ರ ಸರ್ಕಾರ ‘ಒಂದೊಂದು ರಾಜ್ಯಕ್ಕೆ ಒಂದೊಂದು ಅಳತೆಗೋಲು ಉಪಯೋಗಿಸುತ್ತಿರುವುದಕ್ಕಾಗಿ’ ವಿಷಾದಿಸಿದರು.

ಸಚಿವರ ಉತ್ತರದ ನಂತರ ಸಭೆಯು ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿತು.

ಆಕಾಶವಾಣಿಯಲ್ಲಿ ಪಕ್ಷಗಳಿಗೆ ಪ್ರಚಾರಾವಕಾಶ
ನವದೆಹಲಿ, ಡಿ. 28–
ಆಕಾಶವಾಣಿಯಲ್ಲಿ ಚುನಾವಣಾ ಪ್ರಚಾರ ಮಾಡುವುದಕ್ಕೆ ದೊರೆಯುವ ಕಾಲಾವಕಾಶ ಕುರಿತು ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳ ನಾಯಕರಿಗೆ ಚುನಾವಣಾ ಆಯೋಗ ಪತ್ರ ಬರೆದಿದೆ.

ತಲಾ ಹತ್ತು ನಿಮಿಷಗಳ ಅವಧಿಯ ನಾಲ್ಕು ಬಾರಿ ಪ್ರಸಾರಕ್ಕೆ ಪ್ರತಿಯೊಂದು ಪಕ್ಷಕ್ಕೂ ಅನುಮತಿ ಕೊಡಲಾಗುವುದೆಂದು ಸೂಚಿಸಲಾಗಿದೆ.

ಆಯೋಗದ ಈ ಸಲಹೆಗೆ ಸಂಸ್ಥಾ ಕಾಂಗ್ರೆಸ್ ಮಾತ್ರ ಉತ್ತರ ಬರೆದಿದೆ. ಅಲ್ಲದೆ ಅದು ಈ ಸಲಹೆಯನ್ನು ತತ್ವಶಃ ಒಪ್ಪಿಕೊಂಡಿದ್ದರೂ ಕೆಲವು ಸ್ಪಷ್ಟೀಕರಣಗಳನ್ನು ಕೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು