ಕಾವೇರಿ ನೀರಾವರಿ ಯೋಜನೆ ಮಂಜೂರಾತಿಗೆ ಕೋರಿಕೆ: ರಾಜ್ಯಪಾಲರ ಸ್ಪಷ್ಟನೆ
ಬೆಂಗಳೂರು, ಮೇ 14– 1924ರ ಒಪ್ಪಂದದ ಸಂಬಂಧವಿಲ್ಲದೆ ಕಾವೇರಿ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಬೇಕೆಂಬುದು ರಾಜ್ಯ ಸರ್ಕಾರದ ನಿಲುವೆಂದು ರಾಜ್ಯಪಾಲ ಶ್ರೀ ಧರ್ಮವೀರರವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಕಾವೇರಿ ನೀರು ಹಂಚಿಕೆಯ 1924ರ ಒಪ್ಪಂದಕ್ಕೆ ರಾಜ್ಯ ಸರ್ಕಾರ ಬದ್ಧವಾಗುವುದೆಂದೂ ಇದನ್ನು ಬರಹದಲ್ಲಿ ನೀಡಲು ತಾವು ಸಿದ್ಧವೆಂದೂ ಕೇಂದ್ರಕ್ಕೆ ಮೈಸೂರಿನ ರಾಜ್ಯಪಾಲರು ಭರವಸೆ ನೀಡಿದ್ದಾರೆಂಬ ಪತ್ರಿಕಾ ವರದಿಯನ್ನು ಶ್ರೀ ಧರ್ಮವೀರರವರು ಪತ್ರಿಕಾಗೋಷ್ಠಿಯಲ್ಲಿ ನಿರಾಕರಿಸಿ, ‘ನಾನು ಯಾರಿಗೂ ಆ ರೀತಿ ಭರವಸೆ ನೀಡಿಲ್ಲ’ ಎಂದರು.

ದೆಹಲಿಯಿಂದ ಹಿಂತಿರುಗಿದ ಶ್ರೀ ಧರ್ಮವೀರರವರು ಕಾವೇರಿ ನೀರಾವರಿ ಯೋಜನೆಗಳ ಬಗ್ಗೆ ಈಗಿರುವ ಸ್ಥಿತಿಯೇ ಮುಂದುವರಿಯುವಂತೆ ಕಂಡುಬರುವುದೆಂದರು.

ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡಲು ಸಂಸ್ಥಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಒತ್ತಾಯ
ಮುನ್ಷಿನಗರ (ಮುಂಬಯಿ), ಮೇ 14– ಬಾಂಗ್ಲಾ ದೇಶಕ್ಕೆ ಪರಮಾಧಿಕಾರ ವುಳ್ಳ ಪ್ರತ್ಯೇಕ ರಾಷ್ಟ್ರವೆಂದು ಶೀಘ್ರವೇ ಮಾನ್ಯತೆ ನೀಡುವಂತೆ ಸಂಸ್ಥಾ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯು ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.